Haveri, Basava Jayanti, Statue Innaguration, 
ಹಾವೇರಿ

ಜಾತಿರಹಿತ ಸಮಾಜಕ್ಕಾಗಿ ಶ್ರಮಿಸಿದ ಬಸವೇಶ್ವರು; ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ

ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ವರ್ಗರಹಿತ, ಜಾತಿರಹಿತ, ಲಿಂಗ ತಾರತಮ್ಯ ಇಲ್ಲದ ಸಮಾಜವನ್ನು ಮಾನವೀಯ ತಳಹದಿಯ ಮೇಲೆ ನಿರ್ಮಿಸಲು ಜಗಜ್ಯೋತಿ ಬಸವೇಶ್ವರರು ಶ್ರಮಿಸಿದರು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
ಇಲ್ಲಿನ ಬಸವೇಶ್ವರ ನಗರದ ಬಸವೇಶ್ವರ ಉದ್ಯಾನವನದಲ್ಲಿ ಸೋಮವಾರ ಕಪ್ಪು ಶಿಲೆಯ ಬಸವೇಶ್ವರ ಮೂರ್ತಿ ಲೋಕಾರ್ಪಣೆ ಮಾಡಿ, ನಂತರ ಅವರು ಮಾತನಾಡಿದರು.
ಬಸವೇಶ್ವರರ ತತ್ವಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಅವರ ಕನಸು ನನಸಾಗಿಸಬೇಕಿದೆ. ಬಸವೇಶ್ವರ ನಗರದ ಉದ್ಯಾನವನದ ಅಭಿವೃದ್ಧಿಗಾಗಿ ಸದಾ ನಮ್ಮ ಸಹಕಾರ ಇರುತ್ತದೆ ಎಂದರು.
ಹೆಸ್ಕಾಂ ನಿವೃತ್ತ ಅಧಿಕಾರಿ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ಬಸವಣ್ಣನವರು ಮೇಲ್ ಜಾತಿಯಲ್ಲಿ ಜನಿಸಿದರೂ ಕೆಳವರ್ಗದ ಜನಾಂಗದ ಏಳಿಗೆಗಾಗಿ ಅನುಭವ ಮಂಟಪ ಸ್ಥಾಪಿಸಿದರು. ಆ ಮೂಲಕ ಸಮಾನತೆಗಾಗಿ ಶ್ರಮಿಸಿದರು ಎಂದರು.
ರಾಜೇಶ್ವರಿ ಬಿಷ್ಟನಗೌಡ್ರ ಮಾತನಾಡಿ, ಹೆಣ್ಣು ಮಕ್ಕಳಿಗೂ ಸಮಾನತೆಯ ಹಕ್ಕು ಇದೆ ಎಂಬುದನ್ನು ಬಸವೇಶ್ವರರು 12ನೇ ಶತಮಾನದಲ್ಲೇ ಪ್ರತಿಪಾದಿಸಿದರು ಎಂದರು.
ಸಮಾರಂಭದಲ್ಲಿ ಸ್ಥಳೀಯ ನಿವಾಸಿಗಳಾದ ಈರಣ್ಣ ಕುಬಸದ, ವನಮಾಲಾ ಕೋಟಿ, ಎಂ.ಎಲ್.ರಾಮಣ್ಣನವರ, ನಾಗರಾಜ ಕಡ್ಡಿಪುಡಿ, ರಮೇಶ ಸಣ್ಣಿಂಗಮ್ಮನವರ, ಬಿ.ವಿ.ಕೋರಿ, ಕೆ.ಎಂ.ಬಿಜಾಪುರ, ಬಸವರಾಜ ಲಂಬಿ, ಡಾ.ಮಲ್ಲಿಕಾರ್ಜುನ, ಕೃಷ್ಣಾ ಆರೇರ, ರಾಜು ಲಿಂಗಾಡೆ, ಚನ್ನಪ್ಪ ಮಲ್ಲಾಡದ, ಚನ್ನಮ್ಮ ಗಂಗೆನವರ, ಮೀನಾಕ್ಷಿ ಹಿರೇಮಠ, ಪ್ರೇಮಾ ಮನಕಟ್ಟಿ, ಗೀತಾ ಭಜಂತ್ರಿ, ಫಕೀರಪ್ಪ ಮಾಳಗಿ, ಮತ್ತಿತರರು ಪಾಲ್ಗೊಂಡಿದ್ದರು.
ಅಜ್ಜಪ್ಪ ಯಮನೂರ ಮಾತನಾಡಿದರು. ಇಂಧುದರ ಯರೇಸೀಮೆ ನಿರೂಪಿಸಿದರು. ಸಣ್ಣಪ್ಪ ಅಂಗಡಿ ವಂದಿಸಿದರು.