ಹಾವೇರಿ/ ಅಕ್ಕಿಆಲೂರ: ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ವಿದ್ಯಾರ್ಥಿಗಳ ನಡುವೆ ಹಿಜಾಬ್ ಮತ್ತು ಕೇಸರಿ ಶಾಲು ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದ್ದು, ಗುರಿವಾರ ಹಲವು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಹಿಜಾಬ್ ಗೆ ವಿರೋಧಿಸಿದರು.
ಇಲ್ಲಿನ ಶಿರಸಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಕಾಲೇಜ್ ನಲ್ಲಿ ಹಲವು ದಿನಗಳಿಂದ ಎಲ್ಲ ವಿದ್ಯಾರ್ಥಿಗಳಲ್ಲಿ ಸರ್ಕಾರದ ಸಮವಸ್ತ್ರ ಸಂಹಿತೆ ಪಾಲಿಸುವಂತೆ ವಿದ್ಯಾರ್ಥಿಗಳು ಪ್ರಾಚಾರ್ಯರಲ್ಲಿ ಒತ್ತಾಯಿಸಿದ್ದರು. ಆದರೂ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿದ್ದರು. ಹಾಗಾಗಿ, ಗುರುವಾರ ಹಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಕಾಲೇಜ್ ಗೆ ಆಗಮಿಸಿದ್ದರು. ಇದರಿಂದ ಪ್ರಾಚಾರ್ಯರು, ಸಿಬ್ಬಂದಿ ತಬ್ಬಿಬ್ಬಾದರು. ಮೊಬೈಲ್ ವಶಕ್ಕೆ ಪಡೆದು ಕಾಲೇಜ್ ಸಮಯ ಮುಗಿದ ಬಳಿಕ ಮರಳಿಸಿದರು.