agadi, sheshachala, matha,  
ಹಾವೇರಿ

ಅಗಡಿ ಶೇಷಾಚಲ ಮಠಕ್ಕೆ ಸತ್ಯಸಾಯಿ ರಥಯಾತ್ರೆ

ಹಾವೇರಿ: ಶ್ರೀ ಸತ್ಯಸಾಯಿ ಬಾಬಾರ ಅವತರಣ ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ಶ್ರೀ ಸತ್ಯಸಾಯಿ ಪ್ರೇಮವಾಹಿನಿ ರಥಯಾತ್ರೆ ಬುಧವಾರ ತಾಲೂಕಿನ ಅಗಡಿಯ ಆನಂದವನದ ಶ್ರೀ ಶೇಷಾಚಲ ಮಠಕ್ಕೆ ಆಗಮಿಸಿತು.
ಹಾವೇರಿ ನಗರದಿಂದ ಬೆಳಗ್ಗೆ ಕರ್ಜಗಿ ಗ್ರಾಮಕ್ಕೆ ತೆರಳಿ ನಂತರ ಅಗಡಿಯ ಆನಂದವನಕ್ಕೆ ಆಗಮಿಸಿದ ರಥಯಾತ್ರೆಯನ್ನು ಆನಂದವನದ ಶ್ರೀ ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಗತಿಸಿ, ರಥಯಾತ್ರೆಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಮಠದ ಮಹದ್ವಾರದಲ್ಲಿ ಶೇಷಾಚಲ ಸದ್ಗುರು ಪ್ರೌಡಶಾಲೆಯ ವಿದ್ಯಾರ್ಥಿಗಳಿಂದ ಪುಷ್ಪವೃಷ್ಟಿ ನಡೆಯಿತು. ನಂತರ ಪಾದುಕಾ ನಮಸ್ಕಾರ ಮತ್ತು ವಿಭೂತಿ ಪ್ರಸಾದ ವಿತರಣೆ ಜರುಗಿತು.
1965ರಲ್ಲಿ ಉತ್ತರ ಕರ್ನಾಟಕ ಪ್ರವಾಸದಲ್ಲಿ ಇರುವಾಗ ಶ್ರೀಬಾಬಾ ಅವರು ನಮ್ಮ ಆನಂದವನಕ್ಕೆ ಆಗಮಿಸಿದ್ದರು. ಆಗ ಶ್ರೀ ಮಠದಲ್ಲಿ ಸಾವಿರರು ಭಕ್ತರು ಬಾಬಾರ ದರ್ಶನ ಪಡೆದಿದ್ದರು. ನಮ್ಮ ತಂದೆ ಶ್ರೀ ಚಿದಂಬರ ಮೂರ್ತಿ ಚಕ್ರವರ್ತಿಗಳು ಬಾಬಾ ಅವರಿಗೆ ಮಠದ ಪರಂಪರೆಯ ಬಗ್ಗೆ ಹಾಗೂ ಗುರುಪರಂಪರೆಯ ಬಗ್ಗೆ ವಿಶ್ಲೇಷಿದ್ದರು ಎಂದು ಆನಂದವನದ ಶ್ರೀ ಗುರುದತ್ತ ಮೂರ್ತಿ ಚಕ್ರವರ್ತಿ ಸ್ವಾಮೀಜಿ ಸ್ಮರಿಸಿದರು.