ಗುತ್ತಲ ಸಮೀಪದ ಹೊಸರಿತ್ತಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುರಾಜರ ಏಕಾಂತಭಕ್ತರಾಗಿದ್ದ ವಿಭೂತಿಪುರುಷ ಶ್ರೀ ಸುಶೀಲೇಂದ್ರತೀರ್ಥರ ಆರಾಧನಾ ಶತಮಾನೋತ್ಸವ ಅಂಗವಾಗಿ ಶ್ರೀ ಧೀರೇಂದ್ರ ತೀರ್ಥರು ಹಾಗೂ ಶ್ರೀ ಸುಶೀಲೇಂದ್ರ ತೀರ್ಥರ ಮೂಲ ಬೃಂದಾವನಗಳಿಗೆ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಸುವರ್ಣ ಕವಚಗಳನ್ನು ಶುಕ್ರವಾರ ಸರ್ಮಪಿಸಿದರು. 
ಹಾವೇರಿ

ಹೊಸರಿತ್ತಿ ಮೂಲ ಬೃಂದಾವನಗಳಿಗೆ ಸುವರ್ಣ ಕವಚ ಅರ್ಪಣೆ golden kavacha

ಪ್ರಮುಖ ಮುಖ್ಯಾಂಶಗಳು

  • ಹೊಸರಿತ್ತಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ
  • ಶ್ರೀ ಧೀರೇಂದ್ರ ತೀರ್ಥರು, ಶ್ರೀ ಸುಶೀಲೇಂದ್ರ ತೀರ್ಥರ ಗದ್ದುಗೆ

ಗುತ್ತಲ: ಹಾವೇರಿಜಿಲ್ಲೆ ಹೊಸರಿತ್ತಿಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿಯಶ್ರೀ ಧೀರೇಂದ್ರ ತೀರ್ಥರು ಹಾಗೂಶ್ರೀ ಸುಶೀಲೇಂದ್ರ ತೀರ್ಥರ ಮೂಲಬೃಂದಾವನಗಳಿಗೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿಶುಕ್ರವಾರ ಸುವರ್ಣಕವಚಗಳನ್ನುಸಮರ್ಪಿಸಿದರು.

ಗುರುರಾಜರಏಕಾಂತಭಕ್ತರಾಗಿ ವಿಭೂತಿಪುರುಷರುಎನಿಸಿದ್ದ ಶ್ರೀ ಸುಶೀಲೇಂದ್ರತೀರ್ಥರಆರಾಧನಾ ಶತಮಾನೋತ್ಸವ ಅಂಗವಾಗಿನಡೆಯುತ್ತಿರುವ ಕಾರ್ಯಕ್ರಮದಲ್ಲಿಅಂದಾಜು ನಾಲ್ಕು ಅಡಿ ಎತ್ತರ ಹಾಗೂಎರಡು ಅಡಿಗಿಂತ ಅಗಲವಾಗಿರುವಬೃಂದಾವನಗಳಿಗೆ ಈ ಅಪರೂಪದ ಸಮರ್ಪಣೆವೈದಿಕರ ವೇದಘೋಷ ಹಾಗೂ ಭಕ್ತರಜಯಘೋಷದ ಮಧ್ಯೆ ಸ್ವಾಮೀಜಿಗಳಅಮೃತ ಹಸ್ತದಿಂದ ವಿಧ್ಯುಕ್ತವಾಗಿನೆರವೇರಿತು.

ಶ್ರೀಸುಬುಧೇಂದ್ರ ತೀರ್ಥರು ತಮಗೆಭಕ್ತರಿಂದ ಬಂದ ಕಾಣಿಕೆಗಳಿಂದಉಭಯ ಗುರುವರ್ಯರ ಬೃಂದಾವನಗಳಿಗೆಸುವರ್ಣ ಕವಚಗಳನ್ನು ತಯಾರಿಸಿತಂದು ಸಮರ್ಪಿಸಿದ್ದಾರೆ.

ಮಧ್ಯಾರಾಧನೆಅಂಗವಾಗಿ ಶುಕ್ರವಾರ ಬೆಳಗ್ಗೆ6ಗಂಟೆಗೆಸುಪ್ರಭಾತ ಸೇವೆ ನಡೆಯಿತು.8 ಗಂಟೆಗೆಅಷ್ಟೋತ್ತರ ಸಹಿತ ಪಂಚಾಮೃತಅಭಿಷೇಕ,ಮಧ್ಯಾಹ್ನ12ಗಂಟೆಗೆಸಂಸ್ಥಾನ ಪೂಜೆ,ಅಲಂಕಾರ,ಹಸ್ತೋದಕನಂತರ ತೀರ್ಥ ಪ್ರಸಾದ,ಸಂಜೆಸಾಂಸ್ಕೃತಿಕ ಕಾರ್ಯಕ್ರಮಗಳುಹಾಗೂ ರಜತ ರಥೋತ್ಸವ ಜರುಗಿತು.ನಂತರಮಹಾಮಂಗಳಾರತಿ ನೇರವೇರಿತು.

ಶೋಭಾಯಾತ್ರೆಇಂದು:

ಶನಿವಾರಹೊಸರಿತ್ತಿಯಲ್ಲಿ ಶೋಭಾ ಯಾತ್ರೆಜರುಗಲಿದೆ.ಇದೇಸಂದರ್ಭದಲ್ಲಿ ಶ್ರೀ ಸುಬುಧೇಂದ್ರತೀರ್ಥರಿಗೆ ನಾಣ್ಯಗಳು ಹಾಗೂ ಧವಸದಾನ್ಯಗಳಿಂದ ತುಲಾಭಾರ ಸೇವೆನೆರವೇರಲಿದೆ.ಇದಕ್ಕೂಮುನ್ನ ಉತ್ತರಾರಾಧನೆ ಅಂಗವಾಗಿಬೆಳಗ್ಗೆ 6ಗಂಟೆಗೆಸುಪ್ರಭಾತ ಸೇವೆ,ಬೆಳಗ್ಗೆ8ಗಂಟೆಗೆಪಂಚಾಮೃತ ಅಭಿಷೇಕ,ಬೆಳಗ್ಗೆ10ಗಂಟೆಗೆಪಾದಪೂಜೆ ಹಾಗೂ ಕನಕಾಭಿಷೇಕ,ಮಧ್ಯಾಹ್ನ12ಗಂಟೆಗೆಸಂಸ್ಥಾನ ಪೂಜೆ,ಸಂಜೆ7ಕ್ಕೆಸಾಂಸ್ಕೃತಿಕ ಕಾರ್ಯಕ್ರಮಗಳುಹಾಗೂ ಮಹಾಮಂಗಳಾರತಿ ನೆರವೇರಲಿವೆ.