ಸಾಯಿಬಾಬಾ ಮಂದಿರ 
ಹಾವೇರಿ

ಗುರು ಪೂರ್ಣಿಮೆ ಆಚರಣೆ; ಭಕ್ತಿಭಾವದಲ್ಲಿ ಮಿಂದೆದ್ದ ಭಕ್ತರು

ಕರಿಯಪ್ಪ ಅರಳಿಕಟ್ಟಿ

ರಾಣೆಬೆನ್ನೂರು: ಗುರು ರ್ಪೂಣಿಮೆ ಅಂಗವಾಗಿ ನಗರದ ವಿವಿಧ ಧಾಮಿರ್ಕ ಕೇಂದ್ರಗಳಲ್ಲಿ ಗುರುಗಳಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾಮಿರ್ಕ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ನಗರದ ಶ್ರೀ ಸಾಯಿಬಾಬಾ ಮಂದಿರ, ಶ್ರೀ ಸಿದ್ಧಾರೂಢ ಮಠ, ದತ್ತಾತ್ರೇಯ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರ ದಂಡು ಹರಿದುಬಂದಿದ್ದು, ಗುರು ಸ್ಮರಣೆ ಹಾಗೂ ಭಜನೆ ಪೂಜೆಯೊಂದಿಗೆ ಇಡೀ ನಗರದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು.

ಗುರು ರ್ಪೂಣಿಮೆಯ ಹಿನ್ನೆಲೆಯಲ್ಲಿ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಸಾಯಿಬಾಬಾ ಅವರ ದರ್ಶನ ಪಡೆದು, ವಿಶೇಷ ಪೂಜೆ ಹಾಗೂ ಆರತಿಯಲ್ಲಿ ಪಾಲ್ಗೊಂಡರು. ದೇವಸ್ಥಾನದಲ್ಲಿ ಹೂವಿನ ಅಲಂಕಾರ, ದೀಪಾಲಂಕಾರ ಜನರ ಗಮನ ಸೆಳೆಯಿತು.

ದತ್ತಾತ್ರೇಯ ದೇವಸ್ಥಾನದಲ್ಲೂ ಭಕ್ತರ ಸಮಾಗಮ...

ನಗರದ ದತ್ತಾತ್ರೇಯ ದೇವಸ್ಥಾನದಲ್ಲಿಯೂ ಗುರು ರ್ಪೂಣಿಮೆ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ಹಾಗೂ ಆರತಿ ಸೇರಿದಂತೆ ವಿವಿಧ ಧಾಮಿರ್ಕ ಕಾರ್ಯಕ್ರಮಗಳು ನಡೆದವು. ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಭಕ್ತರು ಆಗಮಿಸಿ ದತ್ತಾತ್ರೇಯ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಗುರು ಸ್ವರೂಪವೆಂದೇ ಪರಿಗಣಿಸಲ್ಪಡುವ ದತ್ತಾತ್ರೇಯ ಸ್ವಾಮಿಯ ಆರಾಧನೆಗೆ ವಿಶೇಷ ಮಹತ್ವವಿದ್ದು, ಗುರು ರ್ಪೂಣಿಮೆಯಂದು ದೇವಸ್ಥಾನದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಪೂಜಾ ಕಾರ್ಯಕ್ರಮಗಳ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಗುರು ರ್ಪೂಣಿಮೆ ಹಿನ್ನೆಲೆಯಲ್ಲಿ ನಗರದ ವಿವಿಧ ಧಾಮಿರ್ಕ ಕೇಂದ್ರಗಳಲ್ಲಿ ದಿನವಿಡೀ ಭಕ್ತರ ಸಂಚಾರ ಕಂಡುಬಂದಿತು. ದೇವಸ್ಥಾನಗಳ ಸುತ್ತಮುತ್ತ ಭಕ್ತರಿಗೆ ಅನುಕೂಲವಾಗುವಂತೆ ವಿವಿಧ ವ್ಯವಸ್ಥೆ ಮಾಡಲಾಗಿತ್ತು.