Crime 
ಹಾವೇರಿ

ವೃದ್ಧೆಯ ಬ್ಯಾಗ್ನಲ್ಲಿದ್ದ ಚಿನ್ನದ ಸರ ದೋಚಿದ ದುಷ್ಕರ್ಮಿಗಳು

ಹಾವೇರಿ: ಬಸ್ ಹತ್ತುತ್ತಿದ್ದ ವೃದ್ಧೆಯೊಬ್ಬರ ಬ್ಯಾಗ್ನಲ್ಲಿದ್ದ 2.64 ಲಕ್ಷ ರೂ. ಮೌಲ್ಯದ 33 ಗ್ರಾಂ. ತೂಕದ ಚಿನ್ನದ ಸರವನ್ನು ಯಾರೋ ದೋಚಿರುವ ಘಟನೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.

ಹಾನಗಲ್ಲ ತಾಲೂಕಿನ ನರೆಗಲ್ಲ ಗ್ರಾಮದ ನೀಲವ್ವ ರೇವಣಪ್ಪ ಸುಳ್ಳಳ್ಳಿ (73) ಎಂಬುವರ ಚಿನ್ನದ ಸರ ದೋಚಿರುವುದು.

ಇವರು ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿದ್ದ ಸಮಯದಲ್ಲಿ ಯಾರೋ ದುಷ್ಕಮಿರ್ಗಳು ಬ್ಯಾಗ್ನಲ್ಲಿದ್ದ ಚಿನ್ನದ ಸರ ದೋಚಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.