ರಾಣೆಬೆನ್ನೂರು: ಕಟ್ಟಿಗೆ ತರಲು ಹೋದಾಗ ಬಾಲಕಿಯೊಬ್ಬಳು ಹಾವು ಕಚ್ಚಿ ಮೃತಪಟ್ಟ ಘಟನೆ ತಾಲೂಕಿನ ಕರೂರ ಗ್ರಾಮದಲ್ಲಿ ನಡೆದಿದೆ.
ಮೇಘನಾ ಹನುಮಂತಪ್ಪ ಕೆ.ಬಿ. (17) ಮೃತ ಬಾಲಕಿ.
ಈಕೆ ಮನೆ ಹಿಂಭಾಗದಲ್ಲಿ ಕಟ್ಟಿಗೆ ತರುವ ಸಲುವಾಗಿ ಹೋದಾಗ ಹಾವು ಕಚ್ಚಿ ಮೃತಪಟ್ಟಿದ್ದಾಳೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.