ಪ್ರತಿಭಟನೆ 
ಹಾವೇರಿ

ಗ್ಯಾಸ್ ದರ ಏರಿಕೆ ಖಂಡಿಸಿ ಆಟೋರಿಕ್ಷಾದವರಿಂದ ಪ್ರತಿಭಟನೆ

ರಾಣೆಬೆನ್ನೂರ: ಆಟೋರಿಕ್ಷಾಗಳಿಗೆ ಬಳಸುವ ಎಲ್ಪಿಜಿ ಗ್ಯಾಸ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ಗ್ಯಾಸ್ ಬಂಕ್ ಮಾಲೀಕರು ದರ ವ್ಯತ್ಯಾಸ ಮಾಡಿ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಗರದ ವಿವಿಧ ಆಟೋರಿಾ ಸಂಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಆಟೋರಿಾಗಳ ಮೆರವಣಿಗೆ ಆರಂಭಿಸಿ ಬಸ್ ನಿಲ್ದಾಣ ವೃತ್ತ, ಪೋಸ್ಟ್ ವೃತ್ತ, ಎಂ.ಜಿ. ರಸ್ತೆ, ಕುರುಬಗೇರಿ ಕ್ರಾಸ್ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿ ತಲುಪಿದರು.

ನಗರದಲ್ಲಿ ನೂರಾರು ಆಟೋರಿಾಗಳಿವೆ. ಆಟೋಗಳ ಮಾಲೀಕರು ಮತ್ತು ಚಾಲಕರು ನಿತ್ಯವೂ ಸಾರ್ವಜನಿಕ ಸೇವೆ ಜತೆಗೆ ದುಡಿಮೆ ಮಾಡುತ್ತಿದ್ದಾರೆ. ಆಟೋ ಓಡಿಸಿಕೊಂಡು ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ನಿತ್ಯದ ಬದುಕಿಗೆ ಆಟೋಗಳನ್ನೇ ನಂಬಿಕೊಂಡಿದ್ದೇವೆ.

ಆದರೆ, ಯುದ್ಧದ ನೆಪದಲ್ಲಿ ಗ್ಯಾಸ್ ಬೆಲೆ ಏರಿಕೆ ಮಾಡಲಾಗಿದೆ. ಬಂಕ್ನ ಮಾಲೀಕರು ದರದಲ್ಲಿ ವ್ಯತ್ಯಾಸ ಮಾಡಿ ಮೋಸ ಮಾಡುತ್ತಿದ್ದಾರೆ. ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಟೋರಿಕ್ಷಾದವರಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆಥಿರ್ಕವಾಗಿ, ಸ್ವಾಭಿಮಾನದ ಸ್ವಾವಲಂಬಿ ಜೀವನ ಸಾಗಿಸಲು ವಿಶೇಷ ಆರೋಗ್ಯ ವಿಮೆ, ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೇವೆ ಸೇರಿ ವಿವಿಧ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರಮುಖರಾದ ನಾಗರಾಜ ಹಾರೋಗೋಪ್ಪ, ವಿನಯ ಚನ್ನಪ್ಪನವರ, ಯಲ್ಲಪ್ಪ ಚಿಕ್ಕಣ್ಣನವರ, ರವೀಂದ್ರಗೌಡ ಪಾಟೀಲ, ಜಗದೀಶ ಕೆರೊಡಿ, ಉದಯ ತೆಗ್ಗಿನ, ರಮೇಶ ಕೆಂಪಣ್ಣನವರ, ಮಂಜಪ್ಪ ಗಳಗನಾಥ, ಅಣ್ಣಪ್ಪ ಕೆ., ಮಂಜು ಹಾವೇರಿ, ರಾಜು ರಾವಳ, ಪರಶುರಾಮ ಅಯ್ಯಜ್ಜನವರ, ಮಾಲತೇಶ ವಡ್ಡರ ಮತ್ತಿತರರು ಪಾಲ್ಗೊಂಡಿದ್ದರು.