ಬಂಗಾರ ವಂಚನೆ ಪ್ರಕರಣದಲ್ಲಿ ಆರೋಪಿಯಿಂದ ವಶಪಡಿಸಿಕೊಂಡ ಬೈಕ್ ಮತ್ತು ಹಣದೊಂದಿಗೆ ಬಂಕಾಪುರ ಪಿಎಸ್‌ಐ ಮಂಜುನಾಥ ಎಸ್.ಕೆ, ವೆಂಕಟೇಶ ಲಮಾಣಿ, ವಾಸು ಹೆಗಡೆ, ಗೊವೀಂದ ಲಮಾಣಿ.  
ಹಾವೇರಿ

ನಕಲಿ ಬಂಗಾರ ನೀಡಿ ವಂಚನೆ-ಬಂಧನ

ಬಂಕಾಪುರ: ಅಸಲಿ ಬಂಗಾರ ಎಂದು ನಕಲಿ ಬಂಗಾರ ನೀಡಿ ವಂಚಿಸಿ ಪರಾರಿಯಾಗಿದ್ದ ಆರೋಪಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಹರಪನಹಳ್ಳಿ ತಾಲೂಕಿನ ಮಾಚಿಹಳ್ಳಿ ಕೊರಚರಹಟ್ಟಿಯ ನಿವಾಸಿ ರಾಮಪ್ಪ ನಾಗಪ್ಪ ಕಾವಾಡಿ(43)ಬಂಧಿತ ಆರೋಪಿ. ಫೆ. 3ರಂದು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಕಿಂಗರ್ ನಿವಾಸಿಯಾದ ಶಂಕರ ಹರಿಬಾಬು ದುದಾನಿ ಎಂಬುವವರಿಗೆ ಬಂಗಾರದ ಬಿಲ್ಲೆಗಳನ್ನು ನೀಡುವುದಾಗಿ ಹೇಳಿ ಬಂಕಾಪುರ ರಾಷ್ಟ್ರೀಯ ಹೆದ್ದಾರಿ ಹತ್ತಿರ ಕರೆಯಿಸಿಕೊಂಡಿದ್ದ ಇಬ್ಬರು ಆರೋಪಿಗಳು ನಕಲಿ ಬಂಗಾರ ನೀಡಿ ಐದು ಲಕ್ಷ ರೂ. ಪಡೆದು ಪರಾರಿಯಾಗಿದ್ದರು. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ತನಿಖೆಯಲ್ಲಿದ್ದ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಬಂಧಿತನಿಂದ ಕೃತ್ಯಕ್ಕೆ ಬಳಸಿದ ಒಂದು ಬೈಕ್, ನಾಲ್ಕು ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಸಿಪಿಐ ಅನೀಲಕುಮಾರ ರಾಠೋಡ, ಪಿಎಸ್‌ಐ ಮಂಜುನಾಥ ಎಸ್.ಕೆ, ಶ್ರೀಶೈಲ್ ಕೆಂಚನ್ನವರ, ಸಿಬ್ಬಂದಿಗಳಾದ ಕಾಶಿನಾಥ ಗಾಮನಗಟ್ಟಿ, ವೆಂಕಟೇಶ ಲಮಾಣಿ, ಗೋವಿಂದ ಲಮಾಣಿ, ಬೀರಪ್ಪ ಕಳ್ಳಿಮನಿ, ಕೆ.ರಜನಿ, ಮಾಲತೇಶ ಜಾವೋಜಿ, ನಿಂಗಪ್ಪ ಪೂಜಾರ, ಗಂಗಾಧರ ಹರಿಜನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.