ರಟ್ಟಿಹಳ್ಳಿ ಪಟ್ಟಣದಲ್ಲಿ ಹೋಳಿ Holi ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. 
ಹಾವೇರಿ

Holi ರಟ್ಟಿಹಳ್ಳಿಯಲ್ಲಿ ಸಂಭ್ರಮದ ಹೋಳಿ ಹಬ್ಬ ಆಚರಣೆ

ರಟ್ಟಿಹಳ್ಳಿ: ಪಟ್ಟಣದಲ್ಲಿ ಹೋಳಿ Holi ಹಬ್ಬವನ್ನು ಸಂಭ್ರಮ ಮತ್ತು ಶಾಂತಿಯುತವಾಗಿ ಆಚರಣೆ ಮಾಡಲಾಯಿತು.
ವಿವಿಧೆಡೆ ಹಲಗೆಗಳ ನಾದ, ಹಾಸ್ಯಭರಿತ ವೇಷ ಭೂಷಣಗಳ ಮೂಲಕ ಬಣ್ಣದ ಹಬ್ಬವನ್ನು ಯುವಕರು ಸಂಭ್ರಮಿಸಿದರು. ಪಟ್ಟಣದ ಬೀರಲಿಂಗೇಶ್ವರ ದ್ವಾರಬಾಗಿಲು ಬಳಿ ಡಿಜೆಗೆ ಯುವಕರು, ಮಕ್ಕಳು ಬಣ್ಣ ಮತ್ತು ನೀರು ಎರಚುವುದರ ಮೂಲಕ ಮಿಂದೆದ್ದರು.
ಪಟ್ಟಣದ ಭಗತ್​ಸಿಂಗ್​ ವೃತ್ತ, ಹಳೇ ಬಸ್ಸ್​ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ದೇವಸ್ಥಾನ, ಶಾಲೆ ಮೈದಾನ ಬಳಿ ಕಾಮದಹನ ಅಂಗವಾಗಿ ರಾಶಿ ಕಟ್ಟಿಗೆ, ತೆಂಗಿನ ಗರಿ, ಕುಳ್ಳು ಸಂಗ್ರಹಿಸಿ ಕಾಮೇಶ್ವರನನ್ನು ಪ್ರತಿಷ್ಠಾಪಿಸಲಾಗಿತ್ತು.
ಮಧ್ಯಾಹ್ನ 2 ಗಂಟೆಗೆ ಉತ್ತಮ ಮಳೆ ಬೆಳೆಗಾಗಿ ಪ್ರಾಥಿರ್ಸಿ ಕಾಮದಹನ ಮಾಡುವುದರ ಮೂಲಕ ಹಬ್ಬ ಆಚರಣೆ ಮಾಡಲಾಯಿತು. ಪೊಲೀಸ್​ ಇಲಾಖೆ ಹೋಳಿ ಹಬ್ಬದ ನಿಮಿತ್ತ ಎಲ್ಲೆಡೆ ಬಿಗಿ ಬಂದೋಬಸ್ತ್​ ಮಾಡಲಾಗಿತ್ತು.