RSS ಹಿರೇಕೆರೂರಿನ ಪ್ರಮುಖ ಬೀದಿಗಳಲ್ಲಿ ಆರ್‌ಎಸ್‌ಎಸ್ ಸ್ವಯಂ ಸೇವಕರು ಗಣವೇಶದೊಂದಿಗೆ ಪಥ ಸಂಚಲನ ನಡೆಸಿದರು. 
ಹಾವೇರಿ

ಗೃಹ ಸಂಪರ್ಕ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಲಿ RSS

ಹಿರೇಕೆರೂರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ಧಿ ವರ್ಷದ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾನುವಾರ ಭವ್ಯ ಪಥ ಸಂಚಲನ ನಡೆಯಿತು.
ಪಟ್ಟಣದ ತರಳಬಾಳು ಸಿ.ಬಿ.ಎಸ್.ಇ ಶಾಂತಿಧಾಮ ಶಾಲೆಯ ಆವರಣದಿಂದ ಪ್ರಾರಂಭಗೊಂಡು ಚೌಡಿ ಸರ್ಕಲ್, ಬಸ್ ಸ್ಟ್ಯಾಂಡ್, ಸರ್ವಜ್ಞ ವೃತ್ತ, ಚಿಕ್ಕೇರೂರು ರಸ್ತೆ, ತಂಬಾಕದ ನಗರ ಮೂಲಕ ತಂಬಾಕದ ರೈಸ್ ಮಿಲ್ ಆವರಣದಲ್ಲಿ ಮುಕ್ತಾಯಗೊಂಡಿತು. ತಾಲೂಕಿನ ಐದನೂರಕ್ಕೂ ಹೆಚ್ಚಿನ ಸ್ವಯಂಸೇವಕರು ಗಣವೇಶದೊಂದಿಗೆ ಪಾಲ್ಗೊಂಡಿದ್ದರು. ಮಾರ್ಗದುದ್ದಕ್ಕೂ ಬಂಟಿಂಗ್ಸ್, ರಂಗೋಲಿ, ಹೂವು, ಮಹನೀಯರ ಭಾವಚಿತ್ರಗಳು ರಾರಾಜಿಸಿದವು. ಪಥ ಸಂಚಲನದ ನಂತರ ಆಕರ್ಷಕ ಸಂಘದ ಘೋಷ್ ನುಡಿಸಲಾಯಿತು.
ವಿಭಾಗ ಬೌದ್ಧಿಕ ಪ್ರಮುಖ ಗುರುರಾಜ್ ಕುಲಕರ್ಣಿ ಮಾತನಾಡಿ, ಇದೊಂದು ದೇಶಭಕ್ತರ ಸಂಘಟನೆ. ಸಂಘದ ಶತಾಬ್ಧಿ ಪ್ರಯುಕ್ತ ನಡೆಯುತ್ತಿರುವ ಗೃಹ ಸಂಪರ್ಕ ಅಭಿಯಾನದ ಕುರಿತು ಮಾಹಿತಿ ನೀಡಿ, ಅಭಿಯಾನದಲ್ಲಿ ಎಲ್ಲರೂ ಭಾಗವಹಿಸುವಂತೆ ತಿಳಿಸಿದರು.
ಮಾಜಿ ಸಚಿವ ಬಿ.ಸಿ. ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಸಂಜಿವಯ್ಯ ಕಬ್ಬಿಣಕಂತೀಮಠ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಪ್ರಚಾರ ಪ್ರಮುಖ ಚಂದ್ರು ಕೊರಗರ, ತಾಲೂಕು ಕಾರ್ಯವಾರದ ಸುನಿಲ್ ಕನ್ನಮ್ಮನವರ್, ಸಂಪರ್ಕ ಪ್ರಮುಖರಾದ ರವಿ ಖಂಡಿಬಾಗೂರ, ಅಮರನಾಥ್‌ಸಿಂಗ್ ರಜಪೂತ್, ಮಹೇಂದ್ರ ಈಟೇರ, ರಾಘವೇಂದ್ರ ಪಿ, ಮದನಲಾಲ್ ಶರ್ಮಾ, ಹರ್ಷವರ್ಧನ್, ಚಂದ್ರು ತೆರದಹಳ್ಳಿ, ಶಿವಕುಮಾರ್ ಪ್ಯಾಟೆರ, ಜಗದೀಶ ದೊಡ್ಡಗೌಡ್ರ, ವೀರೇಶ ಕಾಲ್ವಿಹಳ್ಳಿ, ಧರ್ಮರಾಜ್, ರುದ್ರೇಶ್ ಬೇತೂರ, ಶಿವಕುಮಾರ ತಿಪ್ಪಶೆಟ್ಟಿ, ಮಲ್ಲಿಕಾರ್ಜುನ್ ಕೊಡಿ, ರಾಘು ಕುಂಕುಮಗಾರ ಇತರರಿದ್ದರು.