ಹಿರೇಕೆರೂರ ಪಟ್ಟಣದಿಂದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ ಗ್ರಾಮದ ಕಡೆಗೆ ಹೊರಟ ಗಂಡು ಕಾಡಾನೆಯ ಡ್ರೋನ್ ಕ್ಯಾಮರಾದಲ್ಲಿ ಕಂಡುಬಂದ ದೃಶ್ಯ. 
ಹಾವೇರಿ

ಶಿವಮೊಗ್ಗ ಕಾಡಿನತ್ತ ಒಂಟಿ ಸಲಗ elephant journey

ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಹಿರೇಕೆರೂರ ವಲಯ ಅರಣ್ಯಾಧಿಕಾರಿ ವಿಜಯಕುಮಾರ ಮುಡಬಾಗಿಲು ವಿಜಯವಾಣಿಗೆ ಮಾಹಿತಿ ನೀಡಿ, ಮೂರು ದಿನಗಳಿಂದ ಓಡಾಡಿದರೂ ಆನೆ ಯಾರಿಗೂ ತೊಂದರೆ ಮಾಡಿಲ್ಲ. ಜನರ ಕೂಗಾಟದಿಂದ ಬೆಚ್ಚಿಬಿದ್ದು, ಕೈಗೆ ಸಿಗದೇ ಓಡಿ ಹೋಗುತ್ತಿದೆ. ನಮ್ಮ ತಾಲೂಕಿನ ಗಡಿಭಾಗದಿಂದ ಶಿವಮೊಗ್ಗ ಜಿಲ್ಲೆಯತ್ತ ಹೋಗಿದ್ದು, ಸದ್ಯ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಮುಂಜಾಗ್ರತೆಯಾಗಿ ನಮ್ಮ ಗಡಿಭಾಗಕ್ಕೆ ಬರುವ ಕುರಿತು ನಿಗಾ ವಹಿಸಲು ಸಿಬ್ಬಂದಿ ನೇಮಿಸಲಾಗಿದೆ. ರಟ್ಟಿಹಳ್ಳಿ ತಾಲೂಕಿನ ಗುಂಡಗಟ್ಟಿ ಅರಣ್ಯ ಇಲಾಖೆಯ ಫಾಮರ್್​ಹೌಸ್​ನಲ್ಲಿ 5 ನುರಿತ ಆನೆಗಳ ವ್ಯವಸ್ಥೆ ಮಾಡಲಾಗಿದೆ. ಅವಶ್ಯಕತೆ ಬಿದ್ದರೆ ಆನೆ ಸೆರೆಗೆ ಕಾರ್ಯಾಚರಣೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.