ರಾಣೆಬೆನ್ನೂರು: ಬೈಕ್ ಹತ್ತುವಾಗ ಆಕಸ್ಮಿಕವಾಗಿ ಬಿದ್ದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಕೂನಬೇವು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗೌರಮ್ಮ ರಾಮಪ್ಪ ತಂಡೂರ (63) ಮೃತ ವೃದ್ಧೆ.
ಇವರು ರಸ್ತೆ ಬಳಿ ಬೈಕ್ ಹತ್ತುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ. ಇದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.