ಹಿರೇಕೆರೂರಿನ ದುರ್ಗಾದೇವಿ (Durgadevi Jatre)ಜಾತ್ರಾ ಮಹೋತ್ಸವ ನಿಮಿತ್ತ ದೇವಿಯ ವಜ್ರಾಭರಣಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. 
ಹಾವೇರಿ

Durgadevi Jatre ಶಾಸ್ತ್ರೀಯ ಗೊಲ್ಲರ ಸಮಾಜದಿಂದ ದುರ್ಗಾದೇವಿ ಜಾತ್ರೆ

ಹಿರೇಕೆರೂರ: ರಾಜ್ಯ, ಹೊರರಾಜ್ಯಗಳ ಶಾಸ್ತ್ರೀಯ ಗೊಲ್ಲರ ಸಮಾಜದ ವತಿಯಿಂದ ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ಮಂಗಳವಾರ ದೇವಿ ಜಾತ್ರಾ (Durgadevi Jatre) ಮಹೋತ್ಸವ ನೆರವೇರಿತು.
ಪ್ರತಿವರ್ಷ ಶಿವರಾತ್ರಿಯ ನಂತರ ಪಟ್ಟಣಕ್ಕೆ ರಾಜ್ಯದ ಗಡಿ ಪ್ರದೇಶವಾದ ಚಿಂಚಲಿ, ಉಗಾರ, ಶೇಡವಾಳ, ಅಂಕಲಿ, ಚಡಚಣ್, ಜೇಶಂಪುರ, ತಿಂಥಣಿ, ಸಾಂಗಲಿ, ರಬಕವಿ ಬನ್ನಿಹಟ್ಟಿ, ಅಥಣಿ, ಗೋಕಾಕ ಭಾಗದಿಂದ ಅಲೆಮಾರಿ ಗೊಲ್ಲರ ಸಮಾಜದವರು ಆಗಮಿಸುತ್ತಾರೆ. 
ಮಂಗಳವಾರ ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಉಡಿ ತುಂಬುವುದು, ಹೂವು ಮತ್ತು ದಾಗಿನ ಅಲಂಕಾರ ಪೂಜೆ ಸೇರಿದಂತೆ ವಿವಿಧ ಧಾರ್ವಿುಕ ವಿಧಿ-ವಿಧಾನ ನೆರವೇರಿಸಿದರು.
ನಂತರ ಸ್ಟೇಟ್ ಬ್ಯಾಂಕಿನ ಲಾಕರ್​ನಲ್ಲಿರಿಸಿರುವ ದೇವಿಯ ವಜ್ರಾಭರಣಗಳನ್ನು ವಾಹನದಲ್ಲಿಟ್ಟುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳಗಳ ಮೂಲಕ ಅರಿಷಿನ ಹಣ್ಣ ಎರೆಚುತ್ತಾ, ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿದರು. 
ನಂತರ ದೇವಿಗೆ ವಜ್ರಾಭರಣಗಳಿಂದ ಸಿಂಗರಿಸಿ, ಮಹಾಮಂಗಳಾರತಿ ನೆರವೇರಿಸಿ, ಜಾತ್ರೆ ಸಂಭ್ರಮದಿಂದ ಆಚರಿಸಿದರು.
ದುರ್ಗಾದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷ ಜಗದೀಶ ತಂಬಾಕದ, ಮಂಜುನಾಥ ತಂಬಾಕದ, ನಿಂಗರಾಜ ನಾಯ್ಕರ, ಶಿವಕುಮಾರ ಬಾಗಲಕೋಟಿ, ಬಿರೇಶ ಹಾರ್ನಳ್ಳಿ, ಹರೀಶ ಕಲಾಲ್, ಚಂದ್ರಶೇಖರ ಉಣಕಲ್, ಗೊಲ್ಲರ ಸಮಾಜದ ಮುಖಂಡರಾದ ರವಿ ಶಾಸ್ತ್ರೀ, ಶಾಸ್ತ್ರೀ ಗೋಕಾಕ್, ರವಿಶೆಟ್ಟಿ ಗೋಕಾಕ, ದೀಪಕ್ ಅಂಕಲಿ, ದುರ್ಗಪ್ಪ ಶಾಸ್ತ್ರೀ, ಲಕ್ಷ್ಮಣ ಗುಡಿಲ, ಲಕ್ಷ್ಮಣ ಸಿರಕೆ, ಶೇಖರ ಗೊಲ್ಲರ ಹಾಗೂ ಭಕ್ತರು ಇದ್ದರು.