ರಾಣೆಬೆನ್ನೂರು: ಖಾಸಗಿ ಶಾಲೆಗಳ ಮಿತಿಮೀರಿದ ಡೊನೇಶನ್ ಹಾವಳಿ ತಡೆಯುವಂತೆ ಒತ್ತಾಯಿಸಿ ಒತ್ತಾಯಿಸಿ ರಾಜ್ಯ ವಿದ್ಯಾಥಿರ್ ವಿಕಾಸ ಪರಿಷತ್ ವತಿಯಿಂದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಸಂಟನೆಯ ರಾಜ್ಯಾಧ್ಯಕ್ಷ ರವೀಂದ್ರಗೌಡ ಪಾಟೀಲ ಮಾತನಾಡಿ, ಡೊನೇಶನ್ ವಸೂಲಿ ಮಾಡುತ್ತಿರುವ ಹಾಗೂ ಸರ್ಕಾರದಿಂದ ಅನುದಾನಿತಗೊಂಡ ಶಿಕ್ಷಣ ಸಂಸ್ಥೆಯವರು ಕೂಡ ಸುಮಾರು ವರ್ಷಗಳಿಂದ ಡೊನೇಶನ್ ವಸೂಲಿ ಮಾಡಿ ಸರ್ಕಾರ, ಶಿಕ್ಷಣ ಇಲಾಖೆ ಹಾಗೂ ಪೋಷಕರಿಗೆ, ವಿದ್ಯಾಥಿರ್ಗಳಿಗೆ ನಿರಂತರ ಅನ್ಯಾಯ ಮಾಡುತ್ತಿದ್ದಾರೆ.
ಈಗ ಭರ್ಜರಿಯಾಗಿ ಎಡ್ಮಿಶನ್ ಮಾಡಿಸಿಕೊಳ್ಳುತ್ತಾ ಯಾರ ಹಂಗಿಲ್ಲದೆ ಫೀ ಹೆಸರಿನಲ್ಲಿ ಡೊನೇಶನ್ ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ತಮ್ಮ ಅಧ್ಯಕ್ಷತೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸಭೆ ಕರೆದು ತಪ್ಪಿತಸ್ಥ ಶಿಕ್ಷಣ ಸಂಸ್ಥೆಗಳ ಮೇಲೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿದ್ದು ಇದೊಂದು ದೊಡ್ಡ ಮಾಫಿಯಾಯಿದೆ. ಬಡವರ, ಪ್ರತಿಭಾವಂತ ಮಕ್ಕಳಿಗೆ
-ಉನ್ನತ ಮಟ್ಟದ ಶಿಕ್ಷಣ ಮರಚಿಕೆಯಾಗುತ್ತಿದೆ. ಡೊನೇಶನ್ ಹಾವಳಿ ನಿಯಂತ್ರಿಸಬೇಕಾದ ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಖಾಸಗಿ ಶಾಲೆಯವರೊಂದಿಗೆ ಮಿಲಾಪಿಯಾಗಿದ್ದಾರೆ ಎಂದು ಆರೋಪಿಸಿದರು.
ಶಿಕ್ಷಣ ಸಂಸ್ಥೆಯವರು 1ರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಸರ್ಕಾರದಿಂದ ಗ್ರಾಂಟ್ ಆಗಿದ್ದರೂ ಕೂಡ 6ರಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯ ತನಕ ಅವರು ಪ್ರಾರಂಭಿಸಿರುವ ಇಂಗ್ಲಿಷ್ ಕಾನ್ವೆಂಟ್ ಶಾಲೆಯ ವಿದ್ಯಾಥಿರ್ಗಳಿಗೆ ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಯವರು ಕೂಡಲೇ ಈ ಕುರಿತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಐ.ಎಫ್.ಟಿ.ಯು ಸಂಘಟನೆಯ ರಾಜ್ಯ ಮುಖಂಡ ಹೊನ್ನಪ್ಪ ಮರಿಯಮ್ಮನವರ ಮಾತನಾಡಿ, ಯಾವ ಕ್ಷೇತ್ರದಲ್ಲಿಯೂ ನಡೆಯದಂತಹ ಭ್ರಷ್ಟಾಚಾರ ಈ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿದೆ. ಇದರ ಬಗ್ಗೆ ತನಿಖೆಯಾಗಬೇಕೆಂದರು. ವಾರದೊಳಗೆ ಡೆರಾ ಕಮಿಟಿ ಸಭೆ ಕರೆದು ದೂರದಾರ, ಹೋರಾಟಗಾರರನ್ನು ಸಭೆಗೆ ಅಹ್ವಾನಿಸಿ ಸಮಸ್ಯೆ ಆಲಿಸಬೇಕು ಎಂದರು.
ಪ್ರಮುಖರಾದ ಈರಣ್ಣ ಹಲಗೇರಿ, ಜಗದೀಶ ಕೆರೂಡಿ, ಹರಿಹರಗೌಡ ಪಾಟೀಲ, ಸುರೇಶ ಮಲ್ಲಾಪುರ ಮತ್ತಿತರರು ಉಪಸ್ಥಿತರಿದ್ದರು.