ಹಾನಗಲ್ಲ ತಾಲೂಕಿನ ಕಲಕೇರಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಫಲಾನುಭವಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಹಕ್ಕುಪತ್ರ ವಿತರಿಸಿದರು. ಎಸ್.ರೇಣುಕಾ, ಶಂಕರಣ್ಣ ಪಾಟೀಲ, ಇಸ್ಮೈಲಸಾಬ ತಾವರಗೊಪ್ಪ, ಶೇಕಪ್ಪ ಗಾಣಗೇರ, ಗುಡ್ಡನಗೌಡ ಪಾಟೀಲ, ಪ್ರಕಾಶ ಬಾಗಣ್ಣನವರ, ಮಲ್ಲಿಕಾರ್ಜುನ ಕಳ್ಳಿ, ಮಹೇಶ ಬಣಕಾರ, ಬಿ.ಕೆ.ವಾಸನ, ಮಾರ್ತಾಂಡಗೌಡ ಪಾಟೀಲ ಇದ್ದರು.  
ಹಾವೇರಿ

ಇದೀಗ ಸಂಕಷ್ಟಗಳೆಲ್ಲ ದೂರ ಸರಿದಿವೆ...

ಹಾನಗಲ್ಲ: ಸಣ್ಣ ರೈತರು, ಕೂಲಿಕಾರರು, ಬಡವರು, ಮಧ್ಯಮ ಮತ್ತು ಸಾಮಾನ್ಯ ವರ್ಗದ ಕುಟುಂಬಗಳು ನಿವೇಶನ ಖರೀದಿಸಲು ಸಾಧ್ಯವಾಗದೇ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡು ಹತ್ತಾರು ವರ್ಷಗಳಿಂದ ಅತಂತ್ರ ಬದುಕು ನಡೆಸುತ್ತಿದ್ದವು. ಇಂಥ ಕುಟುಂಬಗಳಿಗೆ ಶಾಶ್ವತ ಮನೆ ಮಾಲೀಕತ್ವದ ಹಕ್ಕುಪತ್ರ ವಿತರಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಕಲಕೇರಿ ಗ್ರಾಮದಲ್ಲಿ ಬುಧವಾರ ಕಂದಾಯ ಗ್ರಾಮ ಮತ್ತು ಉಪ ಗ್ರಾಮಗಳ 492 ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. 2023ರಲ್ಲಿ ತಾಲೂಕಿನಲ್ಲಿ ದೃಢಸಂಕಲ್ಪ ಯಾತ್ರೆ ವೇಳೆ ಅತಂತ್ರ ಸ್ಥಿತಿಯಲ್ಲಿದ್ದ ಕುಟುಂಬಗಳನ್ನು ಸ್ವತಂತ್ರಗೊಳಿಸುವ ಸಂಕಲ್ಪ ಮಾಡಲಾಗಿತ್ತು. ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಸಂಕಲ್ಪ ಈಡೇರಿ ಸಾವಿರಾರು ಕುಟುಂಬಗಳಲ್ಲಿ ನೆಮ್ಮದಿ ಮೂಡಿಸಲಾಗಿದೆ. ಮಳೆ ಬಂದು ಮನೆ ಬಿದ್ದರೆ ಪರಿಹಾರ ಸಿಗುತ್ತಿರಲಿಲ್ಲ, ಹೊಸ ಮನೆ ಕಟ್ಟಿಕೊಳ್ಳಲು ಅವಕಾಶ ನೀಡುತ್ತಿರಲಿಲ್ಲ, ಬ್ಯಾಂಕುಗಳು ಸಾಲ ಸೌಲಭ್ಯ ಕೊಡುತ್ತಿರಲಿಲ್ಲ. ಇದೀಗ ಸಂಕಷ್ಟಗಳೆಲ್ಲ ದೂರ ಸರಿದಿವೆ ಎಂದರು.
ತಹಸೀಲ್ದಾರ್ ಎಸ್.ರೇಣುಕಾ  ಮಾತನಾಡಿ, ಶಾಶ್ವತ ಮನೆ ಮಾಲೀಕತ್ವ ಪಡೆದ ಕುಟುಂಬಗಳಿನ್ನು ಭಯ ಪಡುವ ಅಗತ್ಯವಿಲ್ಲ. ಮುಂದೆ ಯಾರೂ ಸಹ ದಾಖಲೆ ಬದಲಿಸಲು ಸಾಧ್ಯವಿಲ್ಲ ಎಂದರು.
 ಕಲಕೇರಿ ಗ್ರಾಮದ 260, ಕಲಕೇರಿ ತಾಂಡಾದ 135, ಮುಳಥಳ್ಳಿಯ 120, ತಾವರಗೊಪ್ಪದ 60, ವೀರಾಪುರದ 40, ವಾಸನದ 23, ಚಿಕ್ಕಹುಲ್ಲಾಳದ 13, ಕನ್ನೇಶ್ವರದ 11, ಹೇರೂರಿನ 9 ಹಾಗೂ ಕೂಸನೂರು ಗ್ರಾಮದ 5 ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ಪ್ರಕಾಶ ಬಣಕಾರ, ನಾಗಪ್ಪ ಮೆಳ್ಳಳ್ಳಿ, ಬಿ.ಎಸ್.ಗೋರೆಗೌಡ್ರ, ಉಮೇಶ ಗೌಳಿ, ಹೇಮನಗೌಡ ಅಡಿಗಣ್ಣನವರ, ಮಾಲತೇಶ ಗೋರೆಗೌಡ್ರ, ಮೂಕಪ್ಪ ಕೊಪ್ಪದ, ಜಯಮ್ಮ ಮಳೆಣ್ಣನವರ, ವಸಂತ ವೆಂಕಟಾಪೂರ, ನಿಜಗುಣಿ ಮಳೆಣ್ಣನವರ, ಅಜ್ಜಪ್ಪ ಕಲ್ಪಾದಿ, ರಾಮಚಂದ್ರ ತಳವಾರ, ಅಲ್ತಾಹಿರ್ ಕಚವಿ, ಮಂಜು ಆಲದಕಟ್ಟಿ, ಪ್ರಕಾಶ ಮಾಸಣಗಿ, ಲಕ್ಷ್ಮಣ ಹರಿಜನ, ಸಿದ್ದು ಕಲ್ಲಣ್ಣನವರ, ದಯಾನಂದ ಹಂಚಿನಮನಿ, ಪ್ರಕಾಶಗೌಡ ಪಾಟೀಲ ಇದ್ದರು.