ಹಿರೇಕೆರೂರಲ್ಲಿ ಏರ್ಪಡಿಸಿದ್ದ ಗುರುಪೂರ್ಣಿಮೆ ಉತ್ಸವವನ್ನು ಶ್ರೀ ಗುರುಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಶಿವಾಜಿರಾವ್ ಮಧೂರಕರ, ಮಲ್ಲಿಕಾರ್ಜುನ ಬುರಡಿಕಟ್ಟಿ, ಶ್ರೀಧರ ಅಗಸಿಬಾಗಿಲ, ಪ್ರಕಾಶ ಶಿರಗಂಬಿ ಇತರರಿದ್ದರು. 
ಹಾವೇರಿ

ಪ್ರಸ್ತುತ ತೋರಿಕೆಯ ವಸ್ತುವಾಗಿದೆ ಭಕ್ತಿ...

ವೀರೇಶ ಸೌದ್ರಿ
ಹಿರೇಕೆರೂರು: ಇಂದಿನ ದಿನಗಳಲ್ಲಿ ಭಕ್ತಿ ತೋರಿಕೆಯ ವಸ್ತುವಾಗಿದೆ. ನಿಷ್ಕಲಂಕ ಮನಸಿನ ಭಕ್ತಿಯು ಸಾಯಿಬಾಬಾಗೆ ಪ್ರೀತಿ ಎಂದು ತಾಲೂಕಿನ ಚಿಕ್ಕೇರೂರ ವಿರಕ್ತಮಠದ ಶ್ರೀ ಗುರುಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ವಿಠ್ಠಲ ನಗರದ ಸಾಯಿಬಾಬಾ ಮಂದಿರದಲ್ಲಿ ಶಿರಡಿ ಸಾಯಿಬಾಬಾ ಸೇವಾ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ 15 ನೇ ವರ್ಷದ ಗುರುಪೂರ್ಣಿಮಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಪ್ರೀತಿ, ಬಾಂಧವ್ಯ ಇಂದು ದೂರವಾಗುತ್ತಿದ್ದು, ಸಂದರ್ಭಕ್ಕೆ ತಕ್ಕಂತೆ ಬದುಕುತ್ತಿದ್ದೇವೆ. ಮನುಷ್ಯ ಬದುಕಿನ ಸಾರ್ಥಕತೆಗೆ ಗುರು ಮಾರ್ಗದರ್ಶನ ಅವಶ್ಯವಾಗಿದೆ. ನಮ್ಮ ಬದುಕಿಗೆ ಮಾನವೀಯ ಮೌಲ್ಯ, ಆದರ್ಶ ತತ್ವ, ಒಳ್ಳೆಯ ನಡೆ-ನುಡಿ ಕಲಿಸಿದವರು ಗುರುವಾಗಿದ್ದಾರೆ ಎಂದರು.
ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಶ್ರೀಧರ ಅಗಸಿಬಾಗಿಲ ಮಾತನಾಡಿ, ಇಂದು ವಿಷಪೂರಿತ ಆಹಾರ ಸೇವಿಸಿ ಅನೇಕ ರೋಗಗಳಿಂದ ಬಳಲುವಂತಾಗಿದೆ. ಮನೆ ಅಡುಗೆ ಒಳ್ಳೆಯದು, ತಾಜಾ ತರಕಾರಿ, ಹಣ್ಣು, ಪೌಷ್ಟಿಕಾಂಶವುಳ್ಳ ಧಾನ್ಯ ಬಳಸಬೇಕು. ದುಶ್ಚಟಗಳಿಂದ ದೂರವಿದ್ದು, ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಧರ್ಮದರ್ಶಿ ಶಿವಾಜಿರಾವ್ ಮಧೂರಕರ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ ಮಾತನಾಡಿದರು. ದುರ್ಗಾದೇವಿ ಮಹಿಳಾ ಸತ್ಸಂಗದ ವತಿಯಿಂದ ವಿಷ್ಣು ಮತ್ತು ಲಲಿತ ಸಹಸ್ರನಾಮಾವಳಿ, ಭಜನೆ ನಡೆಯಿತು, ಗಣ್ಯರನ್ನು ದೇವಸ್ಥಾನ ವತಿಯಿಂದ ಸನ್ಮಾನಿಸಲಾಯಿತು. ನಂತರ ಸಾಯಿಬಾಬಾರವರಿಗೆ ಮಹಾಮಂಗಳಾರತಿ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುರೇಶ ಮಡಿವಾಳರ, ಮಾಜಿ ಅಧ್ಯಕ್ಷ ಮಲ್ಲನಗೌಡ ಪುಟ್ಟಪ್ಪಗೌಡ್ರ, ಚಂದ್ರಮತಿ, ರಾಜು ಖಾಂಡ್ಕೆ, ಪುಟ್ಟನಗೌಡ ಮರಿಗೌಡ್ರ, ಚಂದ್ರು ಮಧೂರಕರ, ರಾಮಚಂದ್ರ ಮಧೂರಕರ, ಮಾರುತಿ ಮಧೂರಕರ, ಪಾಂಡು ಾರ್ಸಿ, ಗಣೇಶ ತಿಪ್ಪಶೆಟ್ಟಿ ಇದ್ದರು. ಪ್ರಕಾಶ ಶಿರಗಂಬಿ, ಇಂದುಧರ ಹಳಕಟ್ಟಿ, ಸಿದ್ದಲಿಂಗಯ್ಯ ಹಿರೇಮಠ ನಿರ್ವಹಿಸಿದರು.