ಸವಣೂರ ತಾಲೂಕು ಗುಂಡೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ನೂತನ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಪದಾಧಿಕಾರಿಗಳ ಪದಗ್ರಹಣ, ಮಾಜಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. 
ಹಾವೇರಿ

ತ್ಯಾಗ, ಪರಿಶ್ರಮದಿಂದ ‘ಸಹಕಾರಿ ಸಂಘ’ ಅಭಿವೃದ್ಧಿ

ಪ್ರಮುಖ ಮುಖ್ಯಾಂಶಗಳು

  • ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸುಭಾಸ ಗಡೆಪ್ಪನವರ ಅಭಿಪ್ರಾಯ
  • ಅಧ್ಯಕ್ಷ, ಉಪಾಧ್ಯಕ್ಷ ಪದಾಧಿಕಾರಿಗಳ ಪದಗ್ರಹಣ
ಸವಣೂರ: ಕಳೆದ 15 ವರ್ಷಗಳಿಂದ ಹಿರಿಯ ಸದಸ್ಯರ ತ್ಯಾಗ, ಪರಿಶ್ರಮ ಹಾಗೂ ಎಲ್ಲರ ಸಹಕಾರದಿಂದ ಸಹಕಾರಿ ಸಂಘ ಸಾಕಷ್ಟು ಏಳುಬೀಳುಗಳ ನಡುವೆ ಅಭಿವೃದ್ಧಿ ಹೊಂದಿದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸುಭಾಸ ಗಡೆಪ್ಪನವರ ಹೇಳಿದರು.
ತಾಲೂಕಿನ ಗುಂಡೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನೂತನ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಪದಾಧಿಕಾರಿಗಳ ಪದಗ್ರಹಣ, ಮಾಜಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮುಂಬರುವ ದಿನಗಳಲ್ಲಿ ಸಹಕಾರ ಕ್ಷೇತ್ರದಿಂದಲೇ ಸಾಕಷ್ಟು ನಿರ್ಣಯಗಳು ಆಗುವ ದಿನಗಳು ಬರಲಿವೆ. ಸಹಕಾರ ಸಂಘದಿಂದ ರೈತರಿಗಾಗಿ ಸಾಕಷ್ಟು ಯೋಜನೆಗಳಿವೆ. ಕಡಿಮೆ ದರದಲ್ಲಿ ಬೀಜ ಗೊಬ್ಬರ ದೊರೆಯಲಿವೆ. ಕೃಷಿ ಸಾಲದಿಂದ ಕೆಸಿಸಿ ಬ್ಯಾಂಕ್ ಆದಾಯ ಕ್ಷೀಣಗೊಳ್ಳುತ್ತಿದೆ. ಸಹಕಾರಿಗಳು ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮುದ್ದತ್ತು ಠೇವಣಿ ಇಡುವುದನ್ನು ಬಿಡಬೇಕು ಎಂದರು.
ಮಾಜಿ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ, ಮಹಾದೇವಗೌಡ ಪಾಟೀಲ, ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಗಂಗಾಧರ ಬಾಣದ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಮೇಶ ಅರಗೋಳ ಹಾಗೂ ಇತರರು ಸಂಘದ ಪ್ರಗತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಗುಂಡೂರು ಸಹಕಾರಿ ಸಂಘದ ನೂತನ ಅಧ್ಯಕ್ಷ ಗದಿಗೆಪ್ಪಗೌಡ ಪಾಟೀಲ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಉಪಾಧ್ಯಕ್ಷ ಸಿದ್ದಪ್ಪ ಪಾಣಿಗಟ್ಟಿ, ಪದಾಧಿಕಾರಿಗಳಾದ ಬಸನಗೌಡ ಕೊಪ್ಪದ, ಕೀರಪ್ಪ ಕಮಡೊಳ್ಳಿ, ಬಸವಣ್ಣೆಪ್ಪ ತೋಟದ, ಹುಸೇನಸಾಬ್ ಕಡೇಮನಿ, ಗಿರಿಯಪ್ಪ ಪೂಜಾರ, ಈಶ್ವರ ಲಮಾಣಿ, ಮಹಾದೇವಪ್ಪ ವಾಲ್ಮೀಕಿ, ಗೌರವ್ವ ಆರೇರ, ಶಾಂತವ್ವ ಗೊಟಗೋಟಿ, ತೆಗ್ಗಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶಗೌಡ ಪಾಟೀಲ, ಪ್ರಮುಖರಾದ ಐ.ಬಿ. ಪಾಟೀಲ, ಪ್ರಮುಖರಾದ ಕಾಂತೇಶ ವಾಲ್ಮೀಕಿ, ನಾಗರಾಜ ವಾಲ್ಮೀಕಿ ಇತರರಿದ್ದರು.