Crime 
ಹಾವೇರಿ

ದೇವರಗುಡ್ಡ ಕಚೇರಿ ಪುಸ್ತಕ ಕಳ್ಳತನ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಕರಿಯಪ್ಪ ಅರಳಿಕಟ್ಟಿ

ರಾಣೆಬೆನ್ನೂರ: ತಾಲೂಕಿನ ದೇವರುಗಡ್ಡದ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನ ಕಚೇರಿಯ ಸಿಸಿ ಕ್ಯಾಮರಾ ಕಿತ್ತು ಕಚೇರಿಯಲ್ಲಿದ್ದ ಚೆಕ್ ರಜಿಸ್ಟರ್ ಪುಸ್ತಕಗಳನ್ನು ಕಳ್ಳತನ ಮಾಡಿರುವ ಕುರಿತು ಇಬ್ಬರು ವ್ಯಕ್ತಿಗಳ ವಿರುದ್ಧ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮದ ಶೇಖಣ್ಣ ಭಜಂತ್ರಿ ಹಾಗೂ ಬಸವರಾಜ ಚೂರಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.

ಇವರ ವಿರುದ್ಧ ಕಚೇರಿಯ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಭರಮಪ್ಪ ಉಮಿರ್ ದೂರು ದಾಖಲಿಸಿದ್ದಾರೆ. ಆರೋಪಿತರಲ್ಲಿ ಶೇಖಣ್ಣ ಈ ಹಿಂದೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ಅವರು ಕೆಲಸದಲ್ಲಿಲ್ಲ. ಆದರೆ, ಆದರೂ ಕಚೇರಿಗೆ ನುಗ್ಗಿ ಸಿಸಿ ಕ್ಯಾಮರಾ ವೈಯರ್ ಕಿತ್ತು ಹಾಕಿ ಚೆಕ್ ರಜಿಸ್ಟರ್ ಪುಸ್ತಕ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.