ಹಿರೇಕೆರೂರಿನ ಪ್ರಮುಖ ಬೀದಿಗಳಲ್ಲಿ (electricity privatization)ರೈತ ಸಂದಿಂದ ಬೃಹತ್​ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. 
ಹಾವೇರಿ

electricity privatization ವಿದ್ಯುತ್​ ಖಾಸಗೀಕರಣ ಕೈಬಿಡಲು ಒತ್ತಾಯ

ವಿವೇಕಾನಂದ ದಾಸನಕೊಪ್ಪ
ಹಿರೇಕೆರೂರ: ವಿದ್ಯುತ್​ ಖಾಸಗೀಕರಣ (electricity privatization) ಕೈಬಿಡುವುದು ಸೇರಿದಂತೆ ವಿದ್ಯುತ್​ಗೆ ಸಂಬಂಧಿಸಿದ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕು ರೈತ ಸಂದಿಂದ (ಕೆ.ಎಸ್​. ಪುಟ್ಟಣ್ಣಯ್ಯ ಬಣ) ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಬೃಹತ್​ ಪ್ರತಿಭಟನಾ ರ್ಯಾಲಿ ನಡೆಸಿ ಹೆಸ್ಕಾಂ ಕಚೇರಿ ಮುತ್ತಿಗೆ ಹಾಕಲಾಯಿತು.
ಸಂದ ಜಿಲ್ಲಾಧ್ಯ ರಾಮಣ್ಣ ಕೆಂಚಳ್ಳೇರ ಮಾತನಾಡಿ, ದುಡಿಯುವ ರೈತನ ರಣೆ ಮಾಡಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದನೆ ಮಾಡುತ್ತಿಲ್ಲ. ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತದಂತಹ ಸಂಕಷ್ಟ ಎದುರಿಸುತ್ತರುವ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸುವುದು ಸರ್ಕಾರಗಳ ಕರ್ತವ್ಯವಾಗಿದೆ. ಆದರೆ, ಎರಡೂ ಸರ್ಕಾರಗಳು ಗಾಯದ ಮೇಲೆ ಬರೆ ಎಳದಂತೆ ವಿದ್ಯುತ್​ ಖಾಸಗೀಕರಣ ಮಾಡಲು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಸ ಪಂಪ್​ಸೆಟ್​ಗಳಿಗೆ 20 ಸಾವಿರ ರೂ. ಪಾವತಿ ಮಾಡಕೊಂಡು ಅಗತ್ಯ ವಿದ್ಯುತ್​ ಪರಿಕರಗಳನ್ನು ಹೆಸ್ಕಾಂ ನೀಡಬೇಕು. ಅಧಿ-ಕ ಒತ್ತಡ ಇರುವ ವಿದ್ಯುತ ಪರಿವರ್ತಕಗಳನ್ನು ಬದಲಾಯಿಸಿ, ಅವುಗಳನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ರೈತ ಸಂದ ಜಿಲ್ಲಾ ಪ್ರಧಾನ ಕಾರ್ಯದಶಿರ್ ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯ ಸಂಚಾಲಕ ಮಾಲತೇಶ ಪೂಜಾರ, ಎಚ್​.ಎಚ್​. ಮುಲ್ಲಾ, ಮಹ್ಮದ್​ ಗೌಸ್​ ಪಾಟೀಲ ಮಾತನಾಡಿದರು.
ತಾಲೂಕು ರೈತ ಸಂದ ಅಧ್ಯ ಪ್ರಭುಗೌಡ ಪ್ಯಾಟಿ, ಶಂಕ್ರಪ್ಪ ಶಿರಗಂಬಿ, ಗಂಗನಗೌಡ ಮುದಿಗೌಡ್ರ, ಶಂಭಣ್ಣ ಮುತ್ತಗಿ, ಬಸನಗೌಡ ಗಂಗಪ್ಪನವರ, ಮಾಲತೇಶ ಜಡಿಯಣ್ಣನವರ, ಮಲ್ಲನಗೌಡ ಮಾಳಗಿ, ಶಾಂತನಗೌಡ ಪಾಟೀಲ, ಶಂಕ್ರಪ್ಪ ಮಕ್ಕಳ್ಳಿ, ಶಂಕ್ರಪ್ಪ ಶಿರಗಂಬಿ, ಮಹೇಂದ್ರಪ್ಪ ತಳವಾರ, ಪ್ರಶಾಂತ ದ್ಯಾವಕ್ಕಳವರ, ಯಾಜಸಾಬ್​ ದೊಡ್ಮನಿ, ರಾಜು ಮುತ್ತಗಿ, ಗಣೇಶ ದೊಡ್ಮನಿ, ಹನುಮಂತಪ್ಪ ಕಡೂರು ಸೇರಿದಂತೆ ವಿವಿಧ ಗ್ರಾಮಗಳ ರೈತರು, ಸಂದ ಪದಾಧಿಕಾರಿಗಳು ಇದ್ದರು.