ಗುತ್ತಲದ ಪಪಂ (Guttal Town Panchayat)ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಕಾಂಗ್ರೆಸ್​ನ ದೀಪಾ ಭರಡಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ರುದ್ರಪ್ಪ ಲಮಾಣಿ, ಎಸ್​ಎ್​ಎನ್​ ಗಾಜೀಗೌಡ್ರ, ಎಂ.ಎಂ . ಮೈದೂರ, ಸಿ.ಬಿ. ಕುರವತ್ತಿಗೌಡರ, ಶಹಜಾನಸಾಬ್​ ಅಗಡಿ ಇದ್ದರು. 
ಹಾವೇರಿ

Town Panchayat ಗುತ್ತಲ ಪಪಂ ಅಧ್ಯಕ್ಷೆಯಾಗಿ ದೀಪಾ ಭರಡಿ ಆಯ್ಕೆ

ಗುತ್ತಲ: ಪಟ್ಟಣ ಪಂಚಾಯಿತಿ ನೂತನ (Guttal Town Panchayat) ಅಧ್ಯಕ್ಷೆಯಾಗಿ ಕಾಂಗ್ರೆಸ್​ನ ದೀಪಾ ಭರಡಿ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ನಿಕಟಪೂರ್ವ ಅಧ್ಯಕ್ಷೆ ಮಾಳವ್ವ ಗೊರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಿದ್ದ ಸ್ಥಾನಕ್ಕೆ 15ನೇ ವಾರ್ಡ್​ನ ಕಾಂಗ್ರೆಸ್​ ಸದಸ್ಯೆ ದೀಪಾ ಭರಡಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದರು. ಹೀಗಾಗಿ, ಚುನಾವಣಾಧಿಕಾರಿ, ತಹಸೀಲ್ದಾರ್​ ಶರಣಮ್ಮ ಕಾರಿ ಅವರು ಅವಿರೋಧ ಆಯ್ಕೆಘೋಷಿಸಿದರು.
ನಂತರ ನೂತನ ಅಧ್ಯಕ್ಷೆ ದೀಪಾ ಭರಡಿ ಅವರನ್ನು ಶಾಸಕ ರುದ್ರಪ್ಪ ಲಮಾಣಿ, ನಗರ ಯೋಜನಾ ಪ್ರಾಧಿಕಾರದ ಅಧ್ಯ ಎಸ್​ಎ್​ಎನ್​ ಗಾಜೀಗೌಡ್ರ, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯ ಎಂ.ಎಂ. ಮೈದೂರ, ತಾಲೂಕು ಶಿಣ ಸುಧಾರಣಾ ಸಮಿತಿ ಸದಸ್ಯ ಸಿ.ಬಿ. ಕುರವತ್ತಿಗೌಡರ, ಆಶ್ರಯ ಸಮಿತಿ ಸದಸ್ಯ ಶಹಜಾನಸಾಬ್​ ಅಗಡಿ ಸೇರಿದಂತೆ ಅನೇಕರು ಸನ್ಮಾನಿಸಿದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದಿಪ ಸಾಲಗೇರಿ, ಸದಸ್ಯರಾದ ಮಾಳವ್ವ ಗೊರವರ, ಎಸ್​. ಜಿ ಹೊನ್ನಪ್ಪನವರ, ಭರಮಣ್ಣ ಹಾದಿಮನಿ, ಖಲೀಲಹ್ಮದ ಖಾಜಿ, ಮಹ್ಮದಹನೀ ರಿತ್ತಿ, ಅಜ್ಜಯ್ಯ ಬಂಡಿವಡ್ಡರ, ಶಕುಂತಲಾ ಗುತ್ತಲ, ರೇಖಾ ಲಮಾಣಿ, ಪಾರವ್ವ ಲಮಾಣಿ, ಬಸವರಾಜ ನೆಗಳೂರ, ನಾಮನಿರ್ದೇಶಿತ ಸದಸ್ಯರಾದ ಪಿ.ಎನ್​. ಹೇಮಗಿರಿಮಠ, ಚನ್ನಪ್ಪ ಕಲಾಲ, ನಿಂಗಪ್ಪ ನಾಯಕ ಸೇರಿದಂತೆ ವಿವಿಧ ಇಲಾಖೆಗಳ ನಾಮನಿರ್ದೇಶಿತ ಸದಸ್ಯರು, ಆಶ್ರಯ ಸಮಿತಿ ಸದಸ್ಯರು, ಕಾಂಗ್ರೆಸ್​ ಕಾರ್ಯಕರ್ತರು ಉಪಸ್ಥಿತರಿದ್ದರು.