Rannebenur 
ಹಾವೇರಿ

ಮಾಡಿದ ಸಾಲ ತೀರಿಸಲಾಗದೆ ನೇಣಿಗೆ ಶರಣು

ರಾಣೆಬೆನ್ನೂರ: ಮಾಡಿದ ಸಾಲ ತೀರಿಸಲಾಗದೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೂನಬೇವು ಪ್ಲಾಟ್ನಲ್ಲಿ ನಡೆದಿದೆ.

ರಾಕೇಶ ಶ್ಯಾಮ್ ಹಂಚಾಟೆ (36) ಮೃತ ವ್ಯಕ್ತಿ.

ಈತ ವೈಯಕ್ತಿಕವಾಗಿ ಕಾರಣಕ್ಕೆ ಸಾಲ ಮಾಡಿಕೊಂಡಿದ್ದ. ಆದರೆ, ಸಾಲ ತೀರಿಸಲಾಗದ ಕಾರಣ ಮನನೊಂದು ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.