Crime 
ಹಾವೇರಿ

ಸಾಲಬಾಧೆಯಿಂದ ನೇಣಿಗೆ ಶರಣಾದ ರೈತ

ಕರಿಯಪ್ಪ ಅರಳಿಕಟ್ಟಿ

ಬಂಕಾಪುರ: ಸಾಲಬಾಧೆಯಿಂದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಗೆ ಸಮೀಪದ ಲಕ್ಕಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಶಿವಪುತ್ರಪ್ಪ ಸಿದ್ದಪ್ಪ ಮುದವಣ್ಣನವರ (75) ಮೃತ ರೈತ.

ಇವರು ಕೃಷಿಗಾಗಿ ಬ್ಯಾಂಕ್ನಲ್ಲಿ 4.50 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಜಮೀನಿನಲ್ಲಿ ಬೆಳೆದಿದ್ದ ಬೆಳೆ ಸರಿಯಾಗಿ ಬೆಳೆದಿರಲಿಲ್ಲ. ಇದರಿಂದ ಮನನೊಂದು ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.