ಹಿರೇಕೆರೂರ ಪಟ್ಟಣದಲ್ಲಿ ಪಶು ಸಂಗೋಪನಾ ಇಲಾಖೆ ಆವರಣದಲ್ಲಿ ನೂತನವಾಗಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದ ಕಚೇರಿಯನ್ನು ಶಾಸಕ ಯು.ಬಿ. ಬಣಕಾರ ಉದ್ಘಾಟಿಸಿದರು. Dairy farming
ಪಟ್ಟಣದ ಪಶು ಸಂಗೋಪನಾ ಇಲಾಖೆ ಆವರಣದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದ ಇಲಾಖೆ ಕಚೇರಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿಯೇ ನಮ್ಮ ಕ್ಷೇತ್ರದಿಂದ ಅತಿ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ನಮ್ಮ ತಂದೆ ಬಿ.ಜಿ. ಬಣಕಾರ ಮತ್ತು ಜಿ.ಬಿ. ಶಂಕರರಾವ್ ಅವರು ಪಶು ಸಂಗೋಪನಾ ಸಚಿವರಾಗಿದ್ದ ಸಂದರ್ಭದಲ್ಲಿ ಹೆಚಿನ ಪಶು ಆಸ್ಪತ್ರೆ, ಧಾರವಾಡದಲ್ಲಿ ಹಾಲು ಒಕ್ಕೂಟ ಸ್ಥಾಪನೆ ಮಾಡಿದ್ದರಿಂದ ಇಂದು ಹೂನುಗಾರಿಕೆ ಲಾಭದಾಯಕ ಉಪಕಸುಬಾಗಿ ಹೊರಹೊಮ್ಮಿದೆ ಎಂದರು.
ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ರಮೇಶ ಮಡಿವಾಳರ, ಸದಸ್ಯರಾದ ಸನಾವುಲ್ಲಾ ಮಕಾನದಾರ, ಷಣ್ಮುಖಯ್ಯ ಮಳಿಮಠ, ಸಿದ್ದು ತಂಬಾಕದ, ವೀರನಗೌಡ ಬಿದರಿ, ಬಿದ್ದಾಡೆಪ್ಪ ವಡೆಯನಪುರ, ನಾಸೀರಖಾನ್, ಮಂಜು ಗುತ್ತಿ, ದ್ಯಾಮನಗೌಡ ಕಡೂರ, ವಿನಯ್ ಪಾಟೀಲ, ಡಾ.ಮಂಜುನಾಥ ಮಾಯಾಚಾರಿ, ಡಾ. ಶ್ರಾವ್ಯ, ಡಾ.ಲೋಹಿತ್, ಪ್ರವೀಣ ಮರಿಗೌಡ್ರ, ಇಂಜಿನಿಯರ್ ಕರಿಬಸಪ್ಪ ದೊಡ್ಮನಿ, ಪಶು ಇಲಾಖೆ ಸಿಬ್ಬಂದಿ, ರೈತರು ಇದ್ದರು. ಪಶು ಪರೀಕ್ಷಕ ಹಾಲೇಶ ನಾಯಕ್ ನಿರ್ವಹಿಸಿದರು.