Crime 
ಹಾವೇರಿ

ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರ ಬಂಧನ

ಕರಿಯಪ್ಪ ಅರಳಿಕಟ್ಟಿ

ಹಿರೇಕೆರೂರ: ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರು ಆರೋಪಿಗಳನ್ನು ತಾಲೂಕಿನ ಹಂಸಬಾವಿ ಪೊಲೀಸ್ ಬಂಧಿಸಿದ್ದಾರೆ.

ತಾಲೂಕಿನ ಚಿಕ್ಕೋಣತಿ ಗ್ರಾಮದ ಫರ್ಖಾನ್ ನನ್ನೆಮೊಹಲ್ಲಾ ಚಿಕ್ಕೇರೂರ ಹಾಗೂ ನಾಗರಾಜ ನಾಗಪ್ಪ ಯತ್ತಿನಹಳ್ಳಿ ಬಂಧಿತರು.

ಇವರು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಸಮಯದಲ್ಲಿ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ಧಾರೆ. ಅವರಿಂದ 1950 ರೂ. ಜಪ್ತಿ ಮಾಡಿದ್ದಾರೆ. ಈ ಕುರಿತು ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.