ಗಲಾಟೆ 
ಹಾವೇರಿ

ಗೋ ರಕ್ಷಕರ ಮೇಲೆ ಅನ್ಯ ಕೋಮಿನವರಿಂದ ಮಾರಣಾಂತಿಕ ಹಲ್ಲೆ

ಕರಿಯಪ್ಪ ಅರಳಿಕಟ್ಟಿ

ರಾಣೆಬೆನ್ನೂರು: ನಗರದಲ್ಲಿ ಅಕ್ರಮವಾಗಿ ಕಸಾಯಿಖಾನೆ ಮಾಡಿಕೊಂಡು ಗೋ ಹತ್ಯೆ ಮಾಡುತ್ತಿದ್ದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಭಜರಂಗದಳದ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಟನೆ ಇಲ್ಲಿಯ ಗುತ್ತಲ ಬಸ್ ನಿಲ್ದಾಣದ ಬಳಿಯ ಖತೀಬ್ ಗಲ್ಲಿಯಲ್ಲಿ ನಡೆದಿದೆ.

ಟನೆಯಲ್ಲಿ ಇಲ್ಲಿಯ ಮಾರುತಿ ನಗರದ ಭಜರಂಗದಳದ ಕಾರ್ಯಕರ್ತ ರುದ್ರೇಶ ದಿನೇಶ ಬುಕ್ಕಶೆಟ್ಟಿ (28) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈತ ಖತೀಬ್ಗಲ್ಲಿ ಅಕ್ರಮವಾಗಿ ಗೋ ಹತ್ಯೆ ಮಾಡಲಾಗುತ್ತಿದೆ ಎಂದು ಪೊಲೀಸ್ ಇಲಾಖೆಯ 112 ನಂಬರ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಜಾಗ ತೋರಿಸು ಬಾ ಎಂದು ರುದ್ರೇಶನನ್ನು ಕರೆದಿದ್ದಾರೆ. ರುದ್ರೇಶ ಕಸಾಯಿಖಾನೆ ತೋರಿಸಿ ವಾಪಸ್ ಬರುತ್ತಿದ್ದ ಸಮಯದಲ್ಲಿ 50 ಜನರ ಅನ್ಯಕೋಮಿನ ಗುಂಪು ಈತನ ಮೇಲೆ ದಾಳಿ ನಡೆಸಿದೆ.

ಕ್ರಿಕೆಟ್ ಬ್ಯಾಟ್, ಬಡಿಗೆ ಹಾಗೂ ಇತರ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ರುದ್ರೇಶ ಸ್ಥಳದಲ್ಲಿಯೆ ಕುಸಿದು ಬಿದ್ದಿದ್ದಾನೆ. ಸ್ಥಳದಲ್ಲಿದ್ದ ಆತನ ಸ್ನೇಹಿತರು ಕೂಡಲೇ ಆತನನ್ನು ನಗರದ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ಧ್ವನಿ ಎತ್ತಿದ್ದರಿಂದ ಹಲ್ಲೆ...

ನಗರದ ಖತೀಬ್ ಗಲ್ಲಿ, ಇಸ್ಲಾಂಪುರ ಓಣಿ ಸೇರಿದಂತೆ ಹಲವೆಡೆ ಅಕ್ರಮವಾಗಿ 25ಕ್ಕೂ ಅಧಿಕ ಕಸಾಯಿಖಾನೆ ಮಾಡಿಕೊಳ್ಳಲಾಗಿದೆ. ಇವುಗಳಲ್ಲಿ ಸರ್ಕಾರದ ನಿಯಮಾವಳಿ ಗಾಳಿಗೆ ತೂರಿ ಹಾಗೂ ಪಶು ವೈದ್ಯರ ಪ್ರಮಾಣಪತ್ರವಿಲ್ಲದೆ ಅಕ್ರಮವಾಗಿ ಗೋ ಹತ್ಯೆ ಮಾಡಲಾಗುತ್ತಿದೆ.

ಈ ಕುರಿತು ಕಳೆದ ವಾರ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ತಹಸೀಲ್ದಾರ್ಗೆ ಮನವಿ ಸಲ್ಲಿಸಿದ್ದೇವೆ. ಇದರ ಪರಿಣಾಮ ನಗರಸಭೆ ಅಧಿಕಾರಿಗಳು ಎರಡು ಕಸಾಯಿಖಾನೆ ಮೇಲೆ ದಾಳಿ ನಡೆಸಿ ಅವುಗಳಿಗೆ ಬೀಗ ಮುದ್ರೆ ಹಾಕಿದ್ದರು. ಇದರಿಂದ ರೋಸಿ ಹೋಗಿರುವ ಅನ್ಯ ಕೋಮಿನವರು ಮತ್ತು ಅಕ್ರಮವಾಗಿ ಗೋ ಹತ್ಯೆ ಮಾಡುತ್ತಿರುವ ದುಷ್ಕಮಿರ್ಗಳು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಭಜರಂಗದಳದ ಕಾರ್ಯಕರ್ತರ ಆರೋಪಿಸಿದ್ದಾರೆ.