ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಸಾಹಿತ್ಯ ಸಮ್ಮೇಳನದ literary conference ಲಾಂಛನವನ್ನು ಶಾಸಕ ಯು.ಬಿ. ಬಣಕಾರ ಮತ್ತು ರಂಗನಾಥಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳು ಬಿ.ಎಂ. ಮೆಣಸಿನಕಾಯಿ ಬಿಡುಗಡೆಗೊಳಿಸಿದರು.  
ಹಾವೇರಿ

ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಿ literary conference

ರಟ್ಟಿಹಳ್ಳಿ: ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ (literary conference)ನಾವೆಲ್ಲರೂ ಸಹಕರಿಸೋಣ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಹಳ್ಳೂರು ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ರಟ್ಟಿಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜ. 31ರಂದು ತಾಲೂಕಿನ 3ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಲಿದೆ. ಕನ್ನಡ ಹಬ್ಬ ಅದ್ದೂರಿಯಾಗಿ ಆಚರಿಸಲು ಕಸಾಪ ಘಟಕದ ಪದಾಧಿಕಾರಿಗಳು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ದೇವಸ್ಥಾನದ ಧರ್ಮದರ್ಶಿಗಳು ಬಿ.ಎಂ. ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಎಂ.ಸಿ. ತುಮ್ಮಿನಕಟ್ಟಿ ಮಾತನಾಡಿದರು. ಸಾಹಿತಿ ಡಾ. ನಿಂಗಪ್ಪ ಚಳಗೇರಿ, ಕೆಎಂಎಫ್ ಮಾಜಿ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಮಂಜುನಾಥ ಹರಿಜನ, ಜಿ. ಕೃಷ್ಣಪ್ಪ, ಡಾ.ಮಂಜುನಾಥ ತಲ್ಲೂರು, ಹನುಮಂತರಾವ್, ಮಲ್ಲಿಕಾರ್ಜುನ ಬುರಡೀಕಟ್ಟಿ, ರಾಘವೇಂದ್ರ ಎ.ಜಿ., ಕೆ.ಸಿ. ನಂಜುಡಪ್ಪ, ಕೆ.ಆರ್. ಕೋಣ್ತಿ, ಸಿ.ಎಸ್. ಕಮ್ಮಾರ, ಮಲ್ಲಿಕಾರ್ಜುನ ಹೇರಕಾರ, ಹೇಮಣ್ಣ ನಿಂಬೆಗುಂದಿ, ಬೀರೇಶ ಕರಡೆಣ್ಣನವರ, ರಾಜು ಹರವಿಶೆಟ್ಟರ್, ಎಸ್.ಬಿ. ಪಾಟೀಲ, ರೇವಣೆಪ್ಪ, ಸಾಹಿತ್ಯ ಪರಿಷತ್ತಿನ ಸದಸ್ಯರು, ಹಳ್ಳೂರು ಗ್ರಾಮಸ್ಥರು ಉಪಸ್ಥಿತರಿದ್ದರು.