ಬ್ಯಾಡಗಿ: 2028ರ ವಿಧಾನಸಭೆ ಚುನಾವಣೆಯಲ್ಲಿ (assembly elections) ಬ್ಯಾಡಗಿ ಮತಕ್ಷೇತ್ರದಿಂದ ಪುನಃ ಸ್ಪರ್ಧಿಸುತ್ತೇನೆ. ಪಕ್ಷವು ನನಗೆ ಟಿಕೆಟ್ ನೀಡಲಿದೆ. ಕ್ಷೇತ್ರದಲ್ಲಿ ಕೆಲ ರಾಜಕೀಯ ವಿರೋಧಿಗಳು ನನ್ನ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಬ್ಯಾಡಗಿ ಪಟ್ಟಣದಲ್ಲಿನ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ವಿಸ್ತರಣೆಗೆ 11 ಕೋಟಿ ರೂ. ಭೂ ಪರಿಹಾರ ಮಾಲೀಕರಿಗೆ ತಲುಪಿದೆ. ಇನ್ನುಳಿದ 16 ಕೋಟಿ ರೂ. ಹಾಗೂ ರಸ್ತೆ ಕಾಮಗಾರಿಗೆ 13.5 ಕೋಟಿ ರೂ. ಬಿಡುಗಡೆಯಾಗಲಿದೆ. ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ ಪೈಪ್ಲೈನ್ ಕಾಮಗಾರಿಗೆ 115.60 ಕೋಟಿ ರೂ.ಒಂದೇ ಹಂತದಲ್ಲಿ ಮಂಜೂರಾಗಲಿದೆ. ಹೊಸ ಬಸ್ ನಿಲ್ದಾಣ ಕಾಮಗಾರಿಗೆ ಶೀಘ್ರದಲ್ಲೆ ಭೂಮಿಪೂಜೆ ನಡೆಯಲಿದೆ. ಬ್ಯಾಡಗಿ ಪಟ್ಟಣದಲ್ಲಿ ಸಿಟಿ ಬಸ್ ಓಡಾಟಕ್ಕೆ ಚಾಲನೆ ಸಿಗಲಿದೆ ಎಂದರು.