ರಟ್ಟಿಹಳ್ಳಿ ಪಟ್ಟಣದಲ್ಲಿ ಜರುಗಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ತಹಸೀಲ್ದಾರ್ ಶ್ವೇತಾ ಅಮರಾವತಿ ಉದ್ಘಾಟಿಸಿದರು. ರವೀಂದ್ರ ಮುದಿಯಪ್ಪನವರ, ಶಿವಕುಮಾರ ಉಪ್ಪಾರ, ಬಸವರಾಜ ಕಟ್ಟೀಮನಿ, ರವಿ ಹದಡೇರ ಇತರರಿದ್ದರು. 
ಹಾವೇರಿ

Constitution Day: ಭಾರತದ್ದು ಶ್ರೇಷ್ಠ ಸಂವಿಧಾನ

ಮಂಜುನಾಥ ಗದಗಿನ
ವಿಜಯವಣಿ ಸುದ್ದಿಜಾಲ ರಟ್ಟಿಹಳ್ಳಿ
ಭಾರತದ ಸಂವಿಧಾನವು ದೊಡ್ಡ ಮತ್ತು ಶ್ರೇಷ್ಠ ಸಂವಿಧಾನವಾಗಿದೆ ಎಂದು ತಹಸೀಲ್ದಾರ್ ಶ್ವೇತಾ ಅಮರಾವತಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ, ತಾಪಂ, ಪಪಂ, ಶಿಕ್ಷಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಪಟ್ಟಣದಲ್ಲಿ ಬುಧವಾರ ಜರುಗಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದ ಅನೇಕ ಸಂವಿಧಾನದ ಭಾಗಗಳನ್ನು ಭಾರತ ಸಂವಿಧಾನ ಒಳಗೊಂಡಿದೆ. ಸಂವಿಧಾನದ ಆಶಯದಂತೆ ನಾವೆಲ್ಲರೂ ಮೂಲಭೂತ ಹಕ್ಕು ಪಡೆದು, ಕರ್ತವ್ಯಗಳನ್ನು ಪಾಲನೆ ಮಾಡಬೇಕು. ಮಕ್ಕಳು ಶಿಕ್ಷಣದೊಂದಿಗೆ ಉತ್ತಮ ನಾಗರಿಕ ಮೌಲ್ಯಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಎಂ.ಎಸ್. ರುದ್ರಗೌಡ್ರು ಸಂವಿಧಾನದ ಪ್ರಸ್ತಾವನೆ ಬೋಧಿಸಿದರು. ವೈ.ವೈ. ಮರಳೀಹಳ್ಳಿ ಸಂವಿಧಾನದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಪ.ಪಂ.ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಪ.ಪಂ.ಸದಸ್ಯರಾದ ಬಸವರಾಜ ಕಟ್ಟೀಮನಿ, ರವಿ ಹದಡೇರ, ಪಿ.ಡಿ. ಬಸನಗೌಡ್ರು, ಬಸವರಾಜ ಆಡಿನವರ, ವೀರನಗೌಡ ಪ್ಯಾಟಿಗೌಡ್ರು, ವಾರ್ಡ್‌ನಗಳಾದ ರಮೇಶ ಹೊಳಜೋಗಿ, ವಿನಾಯಕ ಮಾಳಾಪುರ, ಸಿ.ಸಿ. ಉಪ್ಪಿನ, ಜಕ್ಕಪ್ಪ ತೇಲಿ, ಹನುಮಂತಪ್ಪ ಗಾಜೇರ, ಸಿದ್ದಪ್ಪ ಹರಿಜನ, ರಮೇಶ ಹಿರೇಕಬ್ಬಾರ, ಜಗದೀಶ ದೊಡ್ಮನಿ, ರಾಮಣ್ಣ ಗುಡ್ಡದಮಾದಾಪುರ ಇತರರು ಇದ್ದರು. ರಮೇಶ ಕಮತಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.