ಶಿಗ್ಗಾಂವಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಆಡಳಿತ ಕಚೇರಿಗಳ ಸಂಕೀರ್ಣದಲ್ಲಿ ಬುಧವಾರ ಸಂವಿಧಾನ Constitution ದಿನ ಆಚರಿಸಲಾಯಿತು.
ಶಿಗ್ಗಾಂವಿ: ಪ್ರತಿಯೊಬ್ಬ ಭಾರತೀಯನಿಗೂ ನವೆಂಬರ್ 26 ಹೆಮ್ಮೆಯ ದಿನ. ದೇಶದ ನಾಗರಿಕರಿಗೆ ಸಮಾನತೆಯ ಹಕ್ಕು, ಮುಕ್ತವಾಗಿ ಬದುಕುವ ಹಕ್ಕು ಮತ್ತು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ನೀಡುವ ಸಂವಿಧಾನ (Constitution) ರಚಿಸಿದ ದಿನ ಇದಾಗಿದೆ ಎಂದು ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಹೇಳಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಆಡಳಿತ ಕಚೇರಿಗಳ ಸಂಕೀರ್ಣದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ವೈವಿಧ್ಯತೆಯಿಂದ ಕೂಡಿರುವ ದೇಶ. ಹೀಗಾಗಿ, ಎಲ್ಲರಿಗೂ ಒಪ್ಪಿತವಾಗುವ ಸಂವಿಧಾನ ರಚಿಸುವುದು ಸುಲಭದ ಕೆಲಸವಾಗಿರಲಿಲ್ಲ. ಎಲ್ಲ ಧರ್ಮಗಳು, ಜಾತಿಗಳು ಮತ್ತು ವೈವಿಧ್ಯಮಯ ಸಿದ್ಧಾಂತಗಳ ಜನರನ್ನು ಒಟ್ಟುಗೂಡಿಸಿ ರಚಿಸಿದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ ಎಂದರು.
ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ನಾವು ಸಂವಿಧಾನ ಸರಿಯಾಗಿ ಅರ್ಥೈಸಿಕೊಳ್ಳಬೇಕಾಗಿದೆ. ಸಂವಿಧಾನ ಎಲ್ಲ ಸಮುದಾಯದ ಬಹುದೊಡ್ಡ ಶಕ್ತಿಯಾಗಿ ನಿಂತಿದೆ. ಇದರಿಂದ ಎಲ್ಲ ವರ್ಗದವರು ಶಿಕ್ಷಣ, ಉದ್ಯೋಗ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಬೆಳಗ್ಗೆ ಹೊಸ ಬಸ್ ನಿಲ್ದಾಣದಿಂದ ಪ್ರಾರಂಭವಾದ ಸಂವಿಧಾನ ಜಾಥಾಗೆ ಹೆಸ್ಕಾಂ ಅಧ್ಯಕ್ಷ ಅಜೀಮ್ೕರ್ ಖಾದ್ರಿ ಚಾಲನೆ ನೀಡಿದರು. ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ಆಡಳಿತ ಕಚೇರಿಗಳ ಸಂಕೀರ್ಣದವರೆಗೆ ನಡೆಯಿತು.
ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ತಾಪಂ ಇಒ ಮಂಜುನಾಥ ಸಾಳುಂಕೆ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಅರ್., ನೌಕರರ ಸಂಘದ ತಾಲೂಕು ಅಧ್ಯಕ್ಷ ಅರುಣ ಹುಡೇದಗೌಡ್ರ, ಬಿಇಒ ಎಂ.ಬಿ. ಅಂಬಿಗೇರ, ಸರಸ್ವತಿ ಗಜಕೋಶ, ಹನುಮಂತಪ್ಪ ಮಾದರ, ಡಾ.ಮಲ್ಲೇಶಪ್ಪ ಹರಿಜನ, ಗದಿಗೆಪ್ಪ ಓಲೆಕಾರ, ಬೀಮಣ್ಣ ಓಲೆಕಾರ, ಬಸವರಾಜ ಕಟ್ಟಿಮನಿ, ಹನುಮಂತ ಬಂಡಿಒಡ್ಡರ, ಶಿವಪ್ಪ ಹರಿಜನ, ಮಹೇಶ ವಾಲ್ಮಿಖಿ, ಗದಿಗೆಪ್ಪ ಓಲೆಕಾರ, ಸುರೇಶ ಹರಿಜನ, ಅಶೋಕ ಓಲೆಕಾರ, ದೇವೇಂದ್ರ ತಳವಾರ, ಬಸವರಾಜ ಗೊಬ್ಬಿ ಇತರರಿದ್ದರು.