ಕಾನೂನು ಅರಿವು ನೆರವು 
ಹಾವೇರಿ

ಮಹಿಳಾ ಮಕ್ಕಳ ಸುರಕ್ಷತೆಗೆ ಕಾನೂನು ಅರಿವು ಅಗತ್ಯ

ರಾಣೆಬೆನ್ನೂರು: ಮಹಿಳೆಯರು ಮತ್ತು ಮಕ್ಕಳು ಸಂಕಷ್ಟಕ್ಕೆ ಸಿಲುಕದಂತೆ ಮುನ್ನೆಚ್ಚರಿಕೆ ವಹಿಸುವುದು, ಮಾನವ ಕಳ್ಳಸಾಗಣೆಯಂತಹ ಅಪರಾಧಗಳನ್ನು ತಡೆಗಟ್ಟುವುದು ಹಾಗೂ ಕಾನೂನುಬದ್ಧವಾಗಿ ದೊರೆಯುವ ರಕ್ಷಣೆ ಮತ್ತು ನೆರವಿನ ಕುರಿತು ಅರಿವು ಮೂಡಿಸುವುದು ಅಗತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂರಕ್ಷಣಾಧಿಕಾರಿ ತೋಯಿಬಾ ಪಾಟೀಲ ಹೇಳಿದರು.

ನಗರದ ಕೆಎಲ್ಇ ಸೊಸೈಟಿಯ ರಾಜ ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಸೇವಾ ಅಂಧರ ಸಂಸ್ಥೆ, ಶಕ್ತಿ ಸದನ ಕೇಂದ್ರದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಮಾನವ ಕಳ್ಳಸಾಗಣೆ ತಡೆ ಹಾಗೂ ಮಹಿಳಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜ್ನ ಪ್ರಾಚಾರ್ಯ ಪ್ರೊ. ನಾರಾಯಣ ನಾಯ್ಕ ಮಾತನಾಡಿ, ವಿದ್ಯಾಥಿರ್ನಿಯರಿಗೆ ಕಾನೂನು ಸಲಹೆ ಹಾಗೂ ಮಹಿಳಾ ಜಾಗೃತಿ ಶಿಬಿರಗಳು ಅತ್ಯವಶ್ಯಕವಾಗಿವೆ. ಇಂತಹ ಕಾರ್ಯಕ್ರಮಗಳ ಮೂಲಕ ಮಹಿಳೆಯರು ಮತ್ತು ಯುವತಿಯರು ತಮ್ಮ ಹಕ್ಕುಗಳು ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸೇವಾ ಅಂಧರ ಸಂಸ್ಥೆಯ ಅಧ್ಯಕ್ಷ ಎಚ್.ಆರ್. ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಜಾಗೃತಿ ಕುರಿತು ವಕೀಲೆ ಸುಮಾ ಸಾವಕಾರ ಉಪನ್ಯಾಸ ನೀಡಿದರು.

ಉಪನ್ಯಾಸಕರಾದ ಸರಸ್ವತಿ ಕಮದೋಡ, ಸಹರಾ ಸಂಸ್ಥೆಯ ಗೀತಾ ವಿ., ಅಕ್ಕ ಪಡೆಯ ವಾಣಿಶ್ರೀ ರೆಡ್ಡಿ, ಎನ್.ಕೆ. ಗಂಗಣ್ಣ, ಕೃಪಾ ನಂದಿಹಳ್ಳಿ, ಸೌಮ್ಯ ಎಸ್.ಆರ್., ಸುಜಾತ ಹುಲ್ಲೂರು ಮತ್ತಿತರರು ಉಪಸ್ಥಿತರಿದ್ದರು.