ಗುತ್ತಲ ಸಮೀಪದ ನೀರಲಗಿ ಗ್ರಾಮದ ಪ್ರಾಥಮಿಕ ಶಾಲೆ ಎದುರು ಪಾಲಕರೊಂದಿಗೆ ಮಕ್ಕಳು ಪ್ರತಿಭಟನೆ (protest) ನಡೆಸಿದರು.
ಗುತ್ತಲ: ನೀರಲಗಿ ಗ್ರಾಮದ ಪ್ರಾಥಮಿಕ ಶಾಲೆಗೆ ಹೊಸ ಕೊಠಡಿಗಳ ನಿರ್ವಣಕ್ಕೆ ಆಗ್ರಹಿಸಿ ಶಾಲಾ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆ (protest) ಬುಧವಾರ 2 ದಿನ ಪೂರೈಸಿತು.
ಕಳೆದ ಅನೇಕ ವರ್ಷಗಳಿಂದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಶಿಥಿಲ ಕಟ್ಟಡ ನೆಲಸಮಗೊಳಿಸಿ, ಅಲ್ಲಿ ನೂತನ ಕಟ್ಟಡ ನಿರ್ವಿುಸುವಂತೆ ಬೇಡಿಕೆ ಇಟ್ಟರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರಂಭಗೊಂಡ ಪ್ರತಿಭಟನೆ ಬುಧವಾರ ಮುಂದುವರಿಯಿತು. ತರಗತಿ ಬಿಟ್ಟು ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪಾಲಕರಿಗೆ ಸಾಥ್ ನೀಡಿದರು.
ಶಿಕ್ಷಣ ಇಲಾಖೆ ಅಧಿಕಾರಿಗಳು ದೂರವಾಣಿಯಲ್ಲಿ ಪ್ರತಿಭಟನಾನಿರತರೊಂದಿಗೆ ಮಾತನಾಡಿ ಪ್ರತಿಭಟನೆ ಹಿಂಪಡೆದುಕೊಳ್ಳುವಂತೆ ವಿನಂತಿಸಿದರು. ಆದರೆ, ನೂತನ ಕಟ್ಟಡದ ನಿರ್ವಣಕ್ಕೆ ಆದೇಶ ಬರದ ಹೊರತು ನಾವು ಪ್ರತಿಭಟನೆ ಹಿಂಪಡೆಯಲ್ಲ. ಗುರುವಾರದಿಂದ 1ರಿಂದ 8ನೇ ತರಗತಿಯವರೆಗೆ ಇರುವ 149 ಮಕ್ಕಳನ್ನು ನಾವು ಶಾಲೆಗೆ ಕಳುಹಿಸಲ್ಲ. ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆಯಲ್ಲಿ ವಿಜಯರಡ್ಡಿ ಭರಮರಡ್ಡೇರ, ಶಂಭುಲಿಂಗ ಅಣ್ಣಿಗೇರಿ, ಚನ್ನವೀರಯ್ಯ ಹಿರೇಮಠ, ಮಂಜುನಾಥ ಮರ್ಚರಡ್ಡೇರ, ವೆಂಕಟೇಶ ಶೇಷನಗೌಡ್ರ, ವಿ.ಎಂ. ಅಣ್ಣಿಗೇರಿ, ಹನುಮಂತ ಬನ್ನಿಮಟ್ಟಿ, ದಯಾನಂದ ಈರಪ್ಪನವರ, ಮಂಜುನಾಥ ನಿಂಬಣ್ಣನವರ, ಭರಮಗೌಡ ದೊಡ್ಡಗೌಡ್ರ, ರಾಮಲಿಂಗ ಅಣ್ಣಿಗೇರಿ, ಲಲಿತಾ ಅಣ್ಣಿಗೇರಿ, ಬೇಬಿ ಚನ್ನದಾಸರ, ರೇಖಾ ಅಣ್ಣಿಗೇರಿ, ವಿಜಯಲಕ್ಷ್ಮೀ ದೇಶಗತ್ತಿ, ಸಂಜೀವ ಘೊರ್ಪಡೆ, ಮಾಲತೇಶ ಓಲೇಕಾರ, ಪ್ರಮೋದ ಮರ್ಚರಡ್ಡಿ, ಸಿ.ಡಿ. ಬಡಲಿಂಗಣ್ಣನವರ, ಪ್ರಭುರಡಡಿ ಭರಮರಡ್ಡೇರ, ಬಿ.ಕೆ. ಅಣ್ಣಿಗೇರಿ ಇತರರಿದ್ದರು.