ಗುತ್ತಲ ಸಮೀಪದ ಹಾವನೂರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಮೃತ ಮಗುವಿನ Child death ಪಾಲಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. 
ಹಾವೇರಿ

Child death ತಕ್ಷಣ ಚಿಕಿತ್ಸೆ ಸಿಗದೇ ಮಗು ಸಾವು

ಮಂಜುನಾಥ ಕೆಂಪಸಣ್ಣವರ

ಪ್ರಮುಖ ಮುಖ್ಯಾಂಶಗಳು

  • ಆಸ್ಪತ್ರೆ ಎದುರು ಕುಟುಂಬಸ್ಥರ ಪ್ರತಿಭಟನೆ
  • ಹಾವನೂರ ಗ್ರಾಮದಲ್ಲಿ ಘಟನೆ
ಗುತ್ತಲ: ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದ್ದರಿಂದ ಹೆಣ್ಣು ಮಗುವೊಂದು ಮೃತಪಟ್ಟ Child death ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಮಗುವಿನ ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಸಮೀಪದ ಹಾವನೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ಒಂದು ವರ್ಷದ ಭವಾನಿ ಮಹೇಶ ಕಿಳ್ಳಿಕ್ಯಾತರ ಮೃತಪಟ್ಟ ಮಗು. ಎಂದಿನಂತೆ ಶುಕ್ರವಾರ ಆಟವಾಡುತ್ತಿದ್ದ ಮಗು ಒಮ್ಮೇಲೆ ಉಸಿರಾಟದ ತೊಂದರೆಯಿಂದ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ತಂದೆ ಮಹೇಶ, ತಾಯಿ ಪವಿತ್ರಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.
ಆದರೆ, ಅಲ್ಲಿ ವೈದ್ಯರು, ಸಿಬ್ಬಂದಿ ಇರಲಿಲ್ಲ. ಕಾರಣ ತಕ್ಷಣ ಅಲ್ಲಿಂದ ಗುತ್ತಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮಗು ಮೃತಪಟ್ಟಿದೆ.
ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಮರಳಿ ಹಾವನೂರ ಗ್ರಾಮಕ್ಕೆ ತೆರಳಿ ಆಸ್ಪತ್ರೆ ಮುಂಭಾಗದಲ್ಲಿ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದರು. ಇದಕ್ಕೆ ಗ್ರಾಮಸ್ಥರು ಕೂಡ ಕೈಜೋಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಪಿ.ಎಸ್. ಕುಂದೂರ ಹಾಗೂ ಪಿಎಸ್‌ಐ ಪರಶುರಾಮ ಲಮಾಣಿ ಪತ್ರಿಭಟನಾಕಾರರೊಂದಿಗೆ ಚರ್ಚಿಸಿದರು. ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇಲ್ಲಿಗೆ ಸಿಬ್ಬಂದಿಯನ್ನು ನಿಯೋಜನೆ ಮಾಡುತ್ತೇವೆ ಎಂದು ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು.
ಗಣೇಶ ಕಿಳ್ಳಿಕ್ಯಾತರ, ದತ್ತಾತ್ರೇಯ ಭಂಗಿ, ರಮೇಶ ಮಾಗಳ, ದಾದಾಪೀರ ಕಲಾರಿ, ಹಳ್ಳಪ್ಪ ಇಟ್ಟಿಗುಡಿ, ನಾಗರಾಜ ಕಿಳ್ಳಿಕ್ಯಾತರ, ಹಜರತಲಿ ಮುಜಾವರ, ಗಂಗಾಧರ ಆನೆಗೊಂದಿ, ಆಂಜನೇಯ ವಡ್ಡರ, ಗುಡ್ಡಪ್ಪ ದಿವಟರ, ಶ್ರೀಕಾಂತ ಮರೋಳ, ಅನೇಕರಿದ್ದರು.