ಹಾನಗಲ್​ ಪಟ್ಟಣದಲ್ಲಿ ಜನಗಣತಿ (Census) ಗೀತೆಯ ಸಿಡಿಯನ್ನು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಬಿಡುಗಡೆಗೊಳಿಸಿದರು.  
ಹಾವೇರಿ

Census ದೇಶದ ಪ್ರಗತಿಯಲ್ಲಿ ಜನಗಣತಿ ಪ್ರಮುಖ ಪಾತ್ರ

ವಿವೇಕಾನಂದ ದಾಸನಕೊಪ್ಪ
ಹಾನಗಲ್ಲ: ಜನಗಣತಿ (Census) ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸಾರ್ವಜನಿಕರು ಯಾವುದೇ ಆತಂಕ್ಕೆ ಒಳಗಾಗದೇ ತಮ್ಮ ಕುಟುಂಬದ ರ್ಪೂಣ ಮಾಹಿತಿ ನೀಡಬೇಕು. ಗಣತಿದಾರರು ಸಾರ್ವಜನಿಕರಿಂದ ಮುಕ್ತ ಹಾಗೂ ಲೋಪವಿಲ್ಲದ ಮಾಹಿತಿ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಪಟ್ಟಣದ ಜನತಾ ಶಿಣ ಸೌಹಾರ್ದ ಸಹಕಾರಿ ಸಂದ ಎನ್​ಸಿಜೆಸಿ ಕಾಲೇಜಿನಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಗಣತಿದಾರರ ತರಬೇತಿ ಕಾರ್ಯಕ್ರಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಜನಗಣತಿ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯಬೇಕಾದ ಅತ್ಯಂತ ಮಹತ್ವದ ಸರ್ಕಾರದ ಕಾರ್ಯ. ಎಲ್ಲ ನೌಕರರು ಅದರಲ್ಲೂ ಶಾಲೆಗಳ ಶಿಕರು ಅತ್ಯಂತ ಕಾಳಜಿಯಿಯಿಂದ ಈ ಕೆಲಸ ನಿರ್ವಹಿಸಬೇಕು. ಗಣತಿಗಾಗಿ ಯಾವುದೇ ಮಾಹಿತಿ ಕೊರತೆ ಬಂದಲ್ಲಿ ತಣ ತಾಲೂಕು ಆಡಳಿತ ಸಂಪಕಿರ್ಸಿ ಪರಿಹರಿಸಿಕೊಳ್ಳಬೇಕು ಎಂದರು.
ತಾಲೂಕಿನ ಜನಗಣತಿ ಪ್ರಕ್ರಿಯೆಯ ಮಾಹಿತಿ ನೀಡಿದ ತಹಸೀಲ್ದಾರ್​ ಎಸ್​.ರೇಣುಕಾ, ತಾಲೂಕಿನ 164 ಗ್ರಾಮಗಳು ಹಾಗೂ ಹಾನಗಲ್ಲ ಪುರಸಭೆ ಒಳಗೊಂಡು 70 ಸಾವಿರ ಕುಟುಂಬಗಳಿವೆ. 575 ಶಿಕರು ಗಣತಿದಾರರಾಗಿ ಹಾಗೂ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಣತಿಗಾಗಿ ಒಟ್ಟು 469 ವಿಭಾಗ ರಚಿಸಲಾಗಿದೆ. ಪ್ರತಿ ಕುಟುಂಬ 33 ವಿವರಗಳನ್ನು ಗಣತಿದಾರರ ಮಾಹಿತಿಯಲ್ಲಿ ದಾಖಲಿಸಬೇಕಾಗುತ್ತದೆ. ಮನೆ ಸಂಖ್ಯೆ, ನೆಲಕ್ಕೆ ಬಳಸಿದ ಸಾಮಗ್ರಿ, ಗೋಡೆಗೆ ಬಳಸಲಾದ ಸಾಮಗ್ರಿ, ವಾಸಿಸುತ್ತಿರುವ ವ್ಯಕ್ತಿಗಳ ಸಂಖ್ಯೆ, ಮನೆಯ ಕೊಠಡಿ ಸಂಖ್ಯೆ, ನೀರಿನ ಮೂಲ, ಬೆಳಕಿನ ಸ್ಥಿತಿ, ಶೌಚಗೃಹ, ಸ್ನಾನಗೃಹ, ಅಡುಗೆ ಮನೆ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ವಿವಿಧ ಮಾಹಿತಿ ಈ ಸಂದರ್ಭದಲ್ಲಿ ಕಲೆಹಾಕಬೇಕಾಗುತ್ತದೆ. ಈ ಮಾಹಿತಿ ನೀಡುವುದರಿಂದ ಸರ್ಕಾರದ ಯಾವುದೇ ಸೌಲಭ್ಯವನ್ನು ಕಡಿತಗೊಳಿಸುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಶಿಕ ನಿಂಗಪ್ಪ ಸಾಳುಂಕೆ ಅವರು ರಚಿಸಿ, ಹಾಡಿದ ಜನಗಣತಿ ಗೀತೆಯ ಸಿಡಿಯನ್ನು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಬಿಡುಗಡೆಗೊಳಿಸಿ ಸನ್ಮಾನಿಸಿದರು.
ಗ್ರೇಡ್​ 2 ತಹಸೀಲ್ದಾರ್​ ವೆಂಕಟೇಶ ಚೌಗುಲಾ, ಆರ್​.ವಿ. ಚಿನ್ನಿಕಟ್ಟಿ, ತರಬೇತುದಾರರಾದ ಮಹೇಶ ನಾಯ್ಕ, ಬಿ.ಎನ್​. ಸಂಗೂರ, ವಿ.ಟಿ. ಪಾಟೀಲ ಇದ್ದರು.