Crime 
ಹಾವೇರಿ

ಕಾರು ಡಿಕ್ಕಿಯಾಗಿ ಪಾದಚಾರಿ ಸಾವು

ಕರಿಯಪ್ಪ ಅರಳಿಕಟ್ಟಿ

ಹಾವೇರಿ: ಕಾರು ಡಿಕ್ಕಿಯಾಗಿ ಪಾದಚಾರಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಗೌರಾಪುರ ಬಳಿ ನಡೆದಿದೆ.

ಗ್ರಾಮದ ಫಕ್ಕೀರಪ್ಪ ಭರಮಪ್ಪ ಮರಿಲಿಂಗಣ್ಣನವರ ಮೃತ ಪಾದಚಾರಿ.

ಇವರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಯಾವುದೋ ಕಾರು ಡಿಕ್ಕಿ ಹೊಡೆದುಕೊಂಡು ಹೋಗಿದೆ. ಇದರಿಂದ ಫಕ್ಕೀರಪ್ಪ ಸ್ಥಳದಲ್ಲಿಯೆ ಮತಪಟ್ಟಿದ್ದಾನೆ. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.