ಸವಣೂರ ಪಟ್ಟಣದಲ್ಲಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದವರ ವಿರುದಟಛಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ಹಾಗೂ ತಹಸೀಲ್ದಾರ್ ರವಿಕುಮಾರ ಕೊರವರ ಅವರಿಗೆ ಮನವಿ ಸಲ್ಲಿಸಲಾಯಿತು. ಮಲ್ಲೇಶ ಕರಿಗಾರ, ಬಸವರಾಜ ಹೊಸಮನಿ, ಚನ್ನಪ್ಪ ಬಮ್ಮಕ್ಕನವರ ಇತರರಿದ್ದರು.
ಸವಣೂರ: ಪಟ್ಟಣದ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಶಿಕ್ಷಕ ಜಗದೀಶ ವಗ್ಗಣ್ಣನವರ ಮೇಲೆ ಬುಧವಾರ ಪಾಲಕರು ಹಾಗೂ ಸಾರ್ವಜನಿಕರು ಹಲ್ಲೆ ನಡೆಸಿ ಚಪ್ಪಲಿ ಹಾರ ಹಾಕಿ ಪೊಲೀಸ್ ಠಾಣೆಯವರೆಗೂ ಕರೆತಂದ ಘಟನೆಗೆ ಸಂಬಂಧಿಸಿದಂತೆ ಶಾಲೆ ಮುಖ್ಯಗುರು ರಾಜೇಸಾಬ್ ಸಂಕನೂರ ಅವರು ದೂರು ದಾಖಲಿಸಿದ್ದಾರೆ. ಇನ್ನೊಂದೆಡೆ ಈ ಘಟನೆಯನ್ನು ಖಂಡಿಸಿರುವ ಹಿಂದುಪರ ಸಂಘಟನೆಗಳು, ಡಿ.15ರಂದು ಸವಣೂರ ಬಂದ್‌ಗೆ ಕರೆ ನೀಡಿವೆ.
ದೂರು: ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಬುಧವಾರ ರಜೆಯಲ್ಲಿದ್ದೆ. ಶಿಕ್ಷಕ ಜಗದೀಶ ವಗ್ಗಣ್ಣನವರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮಕ್ಕಳ ಪಾಲಕರು ಮತ್ತು ಸಾರ್ವಜನಿರು ಶಾಲೆಗೆ ಬಂದು ಗಲಾಟೆ ಮಾಡುತ್ತಿದ್ದಾರೆ ಎಂದು ಸಹ ಶಿಕ್ಷಕ ಎ.ಎಂ.ಮಂತ್ರೋಡಿ ಕರೆಮಾಡಿ ವಿಷಯ ತಿಳಿಸಿದರು. ದೌರ್ಜನ್ಯ ನಡೆಸಿರುವ ಕುರಿತು ಮಕ್ಕಳಾಗಲಿ, ಪಾಲಕರಾಗಲಿ ದೂರು ಕೊಡಲು ಮುಂದಾಗಿಲ್ಲ. ಅಲ್ಲದೆ, ಶಿಕ್ಷಕನ ವಿರುದಟಛಿ ದೂರು ನೀಡುವಂತೆ ಮಕ್ಕಳ ಪಾಲಕರು ಒತ್ತಡ ಹೇರಿದ್ದರಿಂದ ಮೇಲಧಿಕಾರಿಗಳ ಗಮನಕ್ಕೆ ತಂದು ದೂರು ನೀಡಲಾಗಿದೆ ಎಂದು ಮುಖ್ಯಗುರು ದೂರಿನಲ್ಲಿ ತಿಳಿಸಿದ್ದಾರೆ.
ಶಿಕ್ಷಕನ ಮೇಲಿನ ಹಲ್ಲೆ ಕುರಿತು ಹಿಂದುಪರ ಕಾರ್ಯಕರ್ತರು ಮತ್ತು ವಿವಿಧ ಸಂಘಟನೆ ಮುಖಂಡರು ಗುರುವಾರ ತಹಸೀಲ್ದಾರ್ ರವಿಕುಮಾರ ಕೊರವರ ಮತ್ತು ಸಿಪಿಐ ಎಸ್.ದೇವಾನಂದ ಅವರೊಂದಿಗೆ ಸಭೆ ನಡೆಸಿದರು. ಕರ್ತವ್ಯನಿರತ ಶಿಕ್ಷಕನ ವಿರುದಟಛಿ ಷಡ್ಯಂತ್ರ ಮಾಡಿ ಕಾನೂನು ಕೈಗೆತ್ತಿಕೊಂಡು ಶಾಲೆಯಲ್ಲಿಯೇ ಹಲ್ಲೆ ಮಾಡಿ, ಚಪ್ಪಲಿ ಹಾರ ಹಾಕಿ ರಸ್ತೆಯುದ್ದಕ್ಕೂಅಮಾನವೀಯವಾಗಿ ಎಳೆದುಕೊಂಡು ಠಾಣೆಗೆ ತಂದಿರುವುದು ಹೀನಾಯ ಕತ್ಯ. ಶಿಕ್ಷಕನ ಮೇಲೆ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಈ ಕುರಿತು ಪಕ್ಷಾತೀತವಾಗಿ ಡಿ.15ರಂದು ಸವಣೂರ ಬಂದ್ ಕರೆ ನೀಡಿದ್ದಾರೆ.