ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತಪಟ್ಟ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅರಣ್ಯಾಧಿಕಾರಿ ಲೋಕೇಶ ಚವ್ಹಾಣ, ಉಪವಲಯ ಅರಣ್ಯಾಧಿಕಾರಿ ಚಮನ ಅಲಿ ಕಾಲೇಖಾನವರ , ಮಂಜುನಾಥ ಕೆ.ಎಚ್. ಇತರರಿದ್ದರು. cheetha
ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರ ರಾಷ್ಟ್ರೀಯ ಹೆದ್ದಾರಿ ದಾಟುವಾಗ ಹೆಣ್ಣು ಚಿರತೆಗೆ ವಾಹನ ಬಡಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಘಟನೆ ಮಾಹಿತಿ ಪಡೆದ ಬ್ಯಾಡಗಿ ಹಾಗೂ ಹಾವೇರಿ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ತಡರಾತ್ರಿ ಘಟನೆ ನಡೆದಿದ್ದರಿಂದ ಅಪಘಾತಕ್ಕೆ ಕಾರಣವಾದ ವಾಹನದ ಸುಳಿವು ಇಲಾಖೆಗೆ ಲಭ್ಯವಾಗಿಲ್ಲ. ಈ ಹಿಂದೆ ಕೂಡ ರಸ್ತೆ ಬಳಿ ಚಿರತೆ, ಸಾರಂಗ, ಚಿರತೆ ಅಪಘಾತದಲ್ಲಿ ಮೃತಪಟ್ಟಿದ್ದು, ಕಾಡುಪ್ರಾಣಿಗಳ ಸಾವು ತಪ್ಪಿಸಲು ಅರಣ್ಯ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಿದೆ. ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಮರಣೋತ್ತರ ಪರೀೆ ಬಳಿಕ ಮೃತಚಿರತೆಯ ಮೃತದೇಹ ಅಂತ್ಯಸಂಸ್ಕಾರ ಮಾಡಲಾಯಿತು. ಈ ವೇಳೆ ಅಕ್ಷಯ ಪ್ರಕಾಶ್ಕರ, ಅರಣ್ಯಾಧಿಕಾರಿ ಲೋಕೇಶ ಚವ್ಹಾಣ, ಉಪವಲಯ ಅರಣ್ಯಾಧಿಕಾರಿ ಚಮನ ಅಲಿ ಕಾಲೇಖಾನವರ, ಮಂಜುನಾಥ ಕೆ.ಎಚ್. ಇತರರಿದ್ದರು.