ಹಾನಗಲ್ಲನಲ್ಲಿ ಫುಟ್​ಪಾತ್ Business in footpath ಆಕ್ರಮಿಸಿರುವ ಗೂಡಂಗಡಿಗಳು. 
ಹಾವೇರಿ

ಪಾದಚಾರಿ ಮಾರ್ಗ ಅತಿಕ್ರಮಿಸಿ ವ್ಯಾಪಾರ

ವಿವೇಕಾನಂದ ದಾಸನಕೊಪ್ಪ
ಎಲ್ಲೆಲ್ಲೂ ಅತಿಕ್ರಮಣ: ಬಸ್ ನಿಲ್ದಾಣದಿಂದ ಎಲ್​ಐಸಿ ಕಚೇರಿವರೆಗೆ, ಮಹಾತ್ಮ ಗಾಂಧಿ ವೃತ್ತದಿಂದ ಸ್ಟೇಟ್ ಬ್ಯಾಂಕ್ ರಸ್ತೆ ಹಾಗೂ ತಹಸೀಲ್ದಾರ್ ಕಚೇರಿ ರಸ್ತೆಗಳಲ್ಲಿ 250ಕ್ಕೂ ಅಧಿಕ ಗೂಡಂಗಡಿಗಳು ತಲೆಯೆತ್ತಿವೆ. ಕೇವಲ ಫುಟ್​ಪಾತ್ ಮಾತ್ರವಲ್ಲದೆ, ರಸ್ತೆ ಮೇಲೆಯೇ ವ್ಯಾಪಾರ ವಹಿವಾಟು ನಡೆಯುತ್ತಿರುವುದು ಸಂಚಾರ ದಟ್ಟಣೆಗೆ ಮುಖ್ಯ ಕಾರಣವಾಗಿದೆ. ಗಾಂಧಿ ವೃತ್ತದ ಪರಿಸ್ಥಿತಿಯಂತೂ ಹೇಳತೀರದಾಗಿದ್ದು, ಕೇಳುವವರೇ ಇಲ್ಲದಂತಾಗಿದೆ.
"

ಫುಟ್​ಪಾತ್ ತೆರವಿಗೆ ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ. ಕಳೆದ ವರ್ಷದ ಸಭೆಯ ಬಳಿಕ ವ್ಯಾಪಾರಿಗಳು ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದರು. ಶೀಘ್ರದಲ್ಲೇ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಿ ರಸ್ತೆಯನ್ನು ಮುಕ್ತಗೊಳಿಸಲಾಗುವುದು.

| ವೈ.ಕೆ. ಜಗದೀಶ, ಮುಖ್ಯಾಧಿಕಾರಿ, ಪುರಸಭೆ ಹಾನಗಲ್ಲ.

"

ಫುಟ್​ಪಾತ್ ತೆರವಿಗಾಗಿ ನಾವು ಪುರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಸಾರ್ವಜನಿಕ ಹಿತಾಸಕ್ತಿಯ ಈ ಕೆಲಸದಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ಮೌನಕ್ಕೆ ಶರಣಾದರೆ ನಾವು ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯ.

| ಪ್ರಶಾಂತ ಮುಚ್ಚಂಡಿ, ಸ್ಥಳೀಯ ನಾಗರಿಕ.