ಹಿರೇಕೆರೂರಿನ ಕೆಎಸ್ಆರ್ಟಿಸಿ ಟಕಕ್ಕೆ ಮಂಜೂರಾದ 4 ಹೊಸ ಬಸ್ಗಳನ್ನು Bus service ಶಾಸಕ ಯು.ಬಿ.ಬಣಕಾರ ಪ್ರಯಾಣಿಕರ ಸೇವೆಗೆ ಲೋಕಾರ್ಪಣೆಗೊಳಿಸಿದರು.
ಹಿರೇಕೆರೂರ: ಸಾರ್ವಜನಿಕರ ಮೂಲಸೌಕರ್ಯಗಳಲ್ಲಿ ಅತ್ಯಂತ ಮಹತ್ವವಾದ ಬಸ್ ಸಂಚಾರವನ್ನು Bus service ಅವಶ್ಯಕತೆಗೆ ತಕ್ಕಂತೆ ಒದಗಿಸುವುದು ಜನಪ್ರತಿನಿಧಿಯ ಕರ್ತವ್ಯವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಕೆಎಸ್ಆರ್ಟಿಸಿ ಟಕಕ್ಕೆ ಮಂಜೂರಾದ 4 ಹೊಸ ಬಸ್ಗಳನ್ನು ಪ್ರಯಾಣಿಕರ ಸೇವೆಗೆ ಸೋಮವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಈಗಾಗಲೇ ಜನರ ಆಸೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಎಲ್ಲ ಗ್ರಾಮಗಳಿಗೆ ತಕ್ಕಮಟ್ಟಗೆ ಬಸ್ ಸಂಚಾರ ಆರಂಭಿಸಲಾಗಿದ್ದು, ಇದರಿಂದ ಟಕಕ್ಕೆ ಆದಾಯ ಜತೆಗೆ, ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿವೆ. ಇನ್ನೂ ಹೆಚ್ಚಿನ ಮಾರ್ಗಗಳ ಬೇಡಿಕೆಯಿದ್ದು, ಹಂತ ಹಂತವಾಗಿ ಅವುಗಳನ್ನು ಪೂರೈಸಲಾಗುವುದು ಎಂದರು.
ಟಕ ವ್ಯವಸ್ಥಾಪಕ ಮಂಜುನಾಥ ಹಡಪದ ಮಾತನಾಡಿದರು. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯ ಮಲ್ಲಿಕಾರ್ಜುನ ಬುರಡಿಕಟ್ಟಿ, ಪಪಂ ಮಾಜಿ ಸದಸ್ಯರಾದ ರಜಿಯಾ ಅಸದಿ, ಸನಾವುಲ್ಲಾ ಮಕಾಂದಾರ, ಪ್ರಮುಖರಾದ ಶಂಭುಲಿಂಗ ಹಂಸಭಾವಿ, ಮಹೇಶ ಹೊಸಮನಿ, ನಿಂಗರಾಜ ನಾಯ್ಕರ, ಪಿ.ಬಿ. ನಿಂಗನಗೌಡ್ರ, ಸುಭಾಸ್ ಮುತ್ತಗಿ, ಜಯದೇವಯ್ಯ ಮಠದ, ಆಂಜನೇಯ ಹೊಸಕಟ್ಟಿ, ಅಧಿಕಾರಿಗಳಾದ ಗಣೇಶ ಊರಣಕರ, ಎಚ್.ವೈ. ಹೊರಕೇರಿ, ಮಾಲತೇಶ ಇದ್ದರು.