Crime 
ಹಾವೇರಿ

ಅಣ್ಣ-ತಂಗಿ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ನಗದು ದರೋಡೆ

ಕರಿಯಪ್ಪ ಅರಳಿಕಟ್ಟಿ

ಹಾವೇರಿ: ಅಣ್ಣ-ತಂಗಿ ಮೇಲೆ ಹಲ್ಲೆ ಮಾಡಿ 4 ಲಕ್ಷ ರೂ. ಮೌಲ್ಯದ ಚಿನ್ನದ ಸರ ಹಾಗೂ 1.20 ಲಕ್ಷ ರೂ. ದರೋಡೆ ಮಾಡಿಕೊಂಡು ಹೋದ ಘಟನೆ ತಾಲೂಕಿನ ಕುಣಿಮೆಳ್ಳಿಹಳ್ಳಿ ಬಳಿ ವರದಾ ನದಿ ಹತ್ತಿರ ನಡೆದಿದೆ.

ಬಂಕಾಪುರದ ಮಾಬುಬಲಿ ಪೀರಸಾಬ ಗಂಜಿಗಟ್ಟಿ (40) ಹಾಗೂ ಈತನ ಸಹೋದರಿ ಜಾಯಾದಾಬಾನು ಎಂಬುವರ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ದೋಚಿರುವುದು.

ಇವರು ವರದಾ ನದಿಯಲ್ಲಿ ಹಳೆಯ ಖುರಾನ ಪುಸ್ತಕ ಹಾಕಿ ವಾಪಸ್ ಬರುತ್ತಿದ್ದ ಸಮಯದಲ್ಲಿ ಯಾರೋ ಇಬ್ಬರು ಬೈಕ್ ಮೇಲೆ ಬಂದು ಜಗಳ ತೆಗೆದು ಹಲ್ಲೆ ಮಾಡಿ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.