Crime 
ಹಾವೇರಿ

ರೊಟ್ಟಿ ಮಷಿನ್ ಕೊಡುವುದಾಗಿ 1.95 ಲಕ್ಷ ರೂ. ವಂಚನೆ

ಕರಿಯಪ್ಪ ಅರಳಿಕಟ್ಟಿ

ಹಾವೇರಿ: ರೊಟ್ಟಿ ಮಾಡುವ ಮಷಿನ್ ಕೊಡುವುದಾಗಿ ನಂಬಿಸಿ 1.95 ಲಕ್ಷ ರೂ. ಪಡೆದುಕೊಂಡು ಮಹಿಳೆಯೊಬ್ಬರಿಗೆ ವಂಚನೆ ಮಾಡಿರುವ ಕುರಿತು ಇಲ್ಲಿಯ ಸೈಬರ್ ಕ್ರೆೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಈಶ್ವರಿ ಸುರೇಶ ಎಂಬುವರಿಗೆ ಮೋಸ ಮಾಡಿರುವುದು.

ಇವರು ತಮ್ಮ ಮೊಬೈಲ್ನಲ್ಲಿ ಇನ್ಸ್ತ್ರಾ್ಟಗ್ರಾಂ ನೀಡುತ್ತಿದ್ದ ರೊಟ್ಟಿ ಮಷಿನ್ ಕುರಿತು ವ್ಯಕ್ತಿಯೊಬ್ಬ ಜಾಹೀರಾತು ಹಾಕಿರುವುದನ್ನು ನೋಡಿದ್ದಾರೆ. ಅವರ ಮೊಬೈಲ್ ನಂಬರ್ಗೆ ಕರೆ ಮಾಡಿ ಮಷಿನ್ ನೀಡುವಂತೆ ಕೇಳಿದಾಗ 1.95 ಲಕ್ಷ ರೂ. ಹಾಕಿಸಿಕೊಂಡಿದ್ದಾನೆ. ನಂತರ ಮಷಿನ್ ಕೊಡದೆ ವಂಚನೆ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.