ಬ್ಯಾಡಗಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಕಾಶ ಮನ್ನಂಗಿ ರಚಿಸಿದ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಡಾ.ಎಚ್.ಎಸ್. ನರೇಂದ್ರ, ಲಿಂಗಯ್ಯ ಹಿರೇಮಠ, ಬಿ.ಎಂ. ಜಗಾಪುರ, ಸತೀಶ ಕುಲಕರ್ಣಿ, ಮಾಲತೇಶ ಚಳಗೇರಿ, ಲಿಂಗರಾಜ ಸೊಟ್ಟಪ್ಪನವರ, ಮಹದೇವರ ಕರಿಯಣ್ಣನವರ, ಗಿರೀಶ ಇಂಡಿಮಠ ಇತರರಿದ್ದರು 
ಹಾವೇರಿ

ಹೊಸ ಪೀಳಿಗೆಗೆ ಹೋರಾಟಗಾರರ ಜೀವನ ಪರಿಚಯಿಸಲಿ

ವೀರೇಶ ಸೌದ್ರಿ
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ಸುಶೀಲ ಪ್ರಕಾಶನ ಮೋಟೆಬೆನ್ನೂರು, ಕಿತ್ತೂರು ಚನ್ನಮ್ಮ ಸೌಹಾರ್ದ ಸಹಕಾರಿ ಬ್ಯಾಂಕ್ ರಾಣೆಬೆನ್ನೂರು ಆಶ್ರಯದಲ್ಲಿ ನಿವೃತ್ತ ಉಪನಿರ್ದೇಶಕ ಪ್ರಕಾಶ ಮನ್ನಂಗಿ ರಚಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೋರಾಟಗಾರರ ಜೀವನ ಸಾಧನೆಗಳನ್ನು ಹೊಸ ಪೀಳಿಗೆಗೆ ಪರಿಚಯಿಸಲಾಗಿದ್ದು, ಇಂತಹ ಕೃತಿಗಳು ಹೆಚ್ಚಾಗಿ ಪ್ರಕಟಗೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಸಾಧಕರ ಪರಿಚಯವಾಗಬೇಕಿದೆ ಎಂದರು. 
ಸಾಹಿತಿ ಮಾಲತೇಶ ಚಳಗೇರಿ ಮಾತನಾಡಿ, ಪ್ರಕಾಶ ಮನ್ನಂಗಿ ಅವರು ಇಳಿವಯಸ್ಸಿನಲ್ಲಿಯೂ ವಾಸ್ತವ ಮಾಹಿತಿ ಸಂಗ್ರಹಿಸಿ ಕೃತಿ ರಚಿಸಿದ್ದಾರೆ. ನಮ್ಮೂರಿನ ರತ್ನಗಳು ಹಾಗೂ ಗುಬ್ಬಿಚಟ್ಟು ಕೃತಿಗಳು ಇತಿಹಾಸದ ಮೇಲೆ ಇನ್ನಷ್ಟು ಬೆಳಕು ಚೆಲ್ಲಲ್ಲಿವೆ ಎಂದರು. 
ಸಭೆಯ ಅಧ್ಯಕ್ಷತೆಯನ್ನು ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ ವಹಿಸಿದ್ದರು. ‘ನಮ್ಮೂರು ರತ್ನಗಳು’ ಹಾಗೂ ‘ಗುಬ್ಬಿಚಟ್ಟು’ ಕೃತಿಯನ್ನು ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಬಿಡುಗಡೆ ಮಾಡಿದರು. 
ಚಿತ್ರಕಲಾ ಶಿಕ್ಷಕ ಪರಮೇಶ್ವರಪ್ಪ ಹುಲ್ಮನಿ, ಮುಖಪುಟ ವಿನ್ಯಾಸಕ ಲಿಂಗರಾಜ ಕುದರಿಹಾಳ, ಆಕಾಶ ಮನ್ನಂಗಿ, ಬಸವರಾಜ ವರೂರು ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಸತೀಶ ಕುಲಕರ್ಣಿ, ಲಿಂಗರಾಜ ಸೊಟ್ಟಪ್ಪನವರ, ಶಿವಾನಂದ ಬೆನ್ನೂರು, ಪೂರ್ಣಿಮಾ ಬೆನ್ನೂರು, ಗಿರೀಶ ಇಂಡಿಮಠ, ಶಿಕ್ಷಕ ಮಹದೇವ ಕರಿಯಣ್ಣನವರ ಹಾಗೂ ಜಮೀರ ರಿತ್ತಿ ಇತರರಿದ್ದರು.