ರಾಣೆಬೆನ್ನೂರ: ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ತಾಲೂಕಿನ ಚನ್ನಾಪುರ ತಾಂಡಾ ಬಳಿ ಬುಧವಾರ ನಡೆದಿದೆ.
ಹಾವೇರಿ ತಾಲೂಕಿನ ಹರಳಹಳ್ಳಿಯ ಹನುಮಂತಪ್ಪ ಬಸಪ್ಪ ಬ್ಯಾಡಗಿ ಮೃತ ಬೈಕ್ ಸವಾರ.
ಈತ ರಾಣೆಬೆನ್ನೂರ ಕಡೆಯಿಂದ ಗುತ್ತಲ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ದಾರಿ ಮಧ್ಯೆ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.