Crime 
ಹಾವೇರಿ

ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಸಾವು

ಹಾವೇರಿ: ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಮೃತಪಟ್ಟ ಘಟನೆ ತಾಲೂಕಿನ ಹಳೇರಿತ್ತಿ ಗ್ರಾಮದ ಬಳಿ ನಡೆದಿದೆ.

ಹೊಸರಿತ್ತಿ ಗ್ರಾಮದ ಕರಬಸಪ್ಪ ಚನ್ನಬಸಪ್ಪ ಅಂಗಡಿ (37) ಮೃತ ಬೈಕ್ ಸವಾರ.

ಈತ ಚಿನ್ನಮುಳಗುಂದ ಗ್ರಾಮದಿಂದ ಹೊಸರಿತ್ತಿಗೆ ಬರುತ್ತಿದ್ದ ಸಮಯದಲ್ಲಿ ಹಳೇರಿತ್ತಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.