Reservation bill ಹಿರೇಕೆರೂರ ಪಟ್ಟಣದಲ್ಲಿ ಬಿಜೆಪಿ ಮಂಡಲದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಹಿರೇಕೆರೂರ: ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ್ ಅಧಿನಿಯಮ ವಿಧೇಯಕವನ್ನು (Reservation bill) ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವಿರೋಧಿಸಿರುವುದನ್ನು ಖಂಡಿಸಿ ಬಿಜೆಪಿ ಮಂಡಲದ ವತಿಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಮಂಡಲ ಅಧ್ಯ ಸಂಜೀವಯ್ಯ ಕಬ್ಬಿಣಕಂತಿಮಠ ಮಾತನಾಡಿ, ನಾರಿ ಶಕ್ತಿ ವಂದನ್ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದಾಗ, ಕಾಂಗ್ರೆಸ್ ಮತ್ತು ಮಿತ್ರ ಪಗಳು ವಿರೋಧಿಸುವ ಮೂಲಕ ದೇಶದ ಮಹಿಳೆಯರಿಗೆ ದ್ರೋಹವೆಸಗಿವೆ. ಮಹಿಳೆಯರಿಗೆ ಇನ್ನು ಹೆಚ್ಚಿನ ಅವಕಾಶ ಮತ್ತು ಅಧಿಕಾರ ಸಿಗಲು ಈ ಮಸೂದೆ ಅತ್ಯಂತ ಅವಶ್ಯವಿತ್ತು. ಇದನ್ನು ತಿಳಿದು ವಿರೋಧ ಪಗಳು ವಿರೋಧಿಸಿರುವುದು ಖಂಡನೀಯವಾಗಿದೆ ಎಂದರು.
ಮುಖಂಡರಾದ ಬಸಮ್ಮ ಅಬಲೂರ, ಪ್ರಕಾಶಗೌಡ ಗೌಡರ, ಶಿವಕುಮಾರ ತಿಪ್ಪಶೆಟ್ಟಿ, ಹರೀಶ ಕಲಾಲ್, ಗುರುಶಾಂತ ಯತ್ತಿನಹಳ್ಳಿ, ಸಿ.ಬಿ. ಮಾಳಗಿ, ಮನೋಹರ ವಡ್ಡಿನಕಟ್ಟಿ, ರಾಜು ಕಾರಗಿ, ಗೀತಾ ದಂಡಗೀಹಳ್ಳಿ, ನೀಲಮ್ಮ ಹೊಸಮನಿ, ಮಧು ಪಾಟೀಲ, ಕವಿತಾ ಭರಮಗೌಡ್ರ, ರುದ್ರೇಶ ಬೇತೂರ, ಅನಿಲ್ ಪಾಟೀಲ ಹಾಗೂ ಪದ ಕಾರ್ಯಕರ್ತರು ಇದ್ದರು.