ಶಿಗ್ಗಾಂವಿ ಪಟ್ಟಣದ ಶಂಕರಗೌಡ್ರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ದೈವಜ್ಞ ದರ್ಶನ ಧರ್ಮ ಜಾಗೃತಿ sanatan dharma ಕಾರ್ಯಕ್ರಮವನ್ನು ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು 
ಹಾವೇರಿ

sanatan dharma ಸನಾತನ ಧರ್ಮ ಉಳಿಸಲು ಜಾಗೃತರಾಗಿ

ಶಿಗ್ಗಾಂವಿ: ಪಾಶ್ಚಿಮಾತ್ಯ ಪ್ರಭಾವದಿಂದಾಗಿ ಇಂದು ಸನಾತನ ಧರ್ಮ, ಸಂಸ್ಕಾರ, ಸಂಸ್ಕೃತಿಗಳು ಕಣ್ಮರೆಯಾಗುತ್ತಿವೆ. ಪ್ರತಿಯೊಬ್ಬರೂ ಸನಾತನ ಧರ್ಮದ sanatan dharma ಉಳಿವಿಗಾಗಿ ಜಾಗೃತರಾಬೇಕು ಎಂದು ದೈವಜ್ಞ ಬ್ರಾಹ್ಮಣ ಸಮಾಜದ ಮಠಾಧೀಶ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಪಟ್ಟಣದ ಶಂಕರಗೌಡ್ರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ದೈವಜ್ಞ ದರ್ಶನ ಧರ್ಮ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕಾಗಿ ಸಮಯ ದಾನ, ಅರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು.
ಸಮಾಜದಿಂದ ನಿಮ್ಮ ಮಕ್ಕಳಿಗೆ ಸಂಸ್ಕಾರ ನೀಡುವ ಮೂಲಕ ಧರ್ಮ ಬೆಳೆಸುವ ಕಾರ್ಯ ಮಾಡಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ, ಸುಸಂಸ್ಕೃತ ಸಮಾಜ ಕಟ್ಟುವ ಕೆಲಸಕ್ಕೆ ಮುಂದಾಗಬೇಕು ಎಂದರು.
ಸಮ್ಮುಖ ವಹಿಸಿದ್ದ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಮಾತನಾಡಿ, ಹಿರಿಯ ಶ್ರೀಗಳ ಮಾರ್ಗದರ್ಶನ, ಸಮಾಜದ ಸಹಕಾರದಿಂದ ಎಲ್ಲರನ್ನು ಒಗ್ಗೂಡಿಸಿ ಪರಮಾತ್ಮನ ಸೇವೆ ಮಾಡಲು ಮುಂದಾಗಬೇಕು ಎಂದರು.
ದೈವಜ್ಞ ಸಮಾಜದ ತಾಲೂಕು ಅಧ್ಯಕ್ಷ ಸುಧಾಕರ ದೈವಜ್ಞ, ಪ್ರಕಾಶ ವೇರ್ಣೆಕರ, ಚಂದ್ರಕಾಂತ ಪಾಲನಕರ, ದಿವಾಕರ ವೇರ್ಣೆಕರ, ಮೋಹನ ರಾಯ್ಕರ ಮಾತನಾಡಿದರು.
ವಾಸುದೇವ ರಾಯ್ಕರ, ದತ್ತಣ್ಣಾ ವೇರ್ಣೆಕರ, ವಿನಾಯಕ ರಾಯ್ಕರ, ಪ್ರಕಾಶ ಪಾಲನಕರ, ವೀಣಾ ಕುರಡೇಕರ, ರಾಮಕೃಷ್ಣ ರಾಯ್ಕರ, ಅಶೋಕ ರಾಯ್ಕರ, ನಾಗರಾಜ ರಾಯ್ಕರ್, ಮಾರುತಿ ರಾಯ್ಕರ, ರವಿ ರಾಯ್ಕರ, ಮಂಜುನಾಥ ವೇರ್ಣೆಕರ, ಇತರರಿದ್ದರು.