Crime 
ಹಾವೇರಿ

ಬಾರ್ ನಲ್ಲಿ ಕೆಲಸ ಬಿಡಿಸಿದ್ದರಿಂದ ಬೇಸರಗೊಂಡ ವ್ಯಕ್ತಿ ಆತ್ಮಹತ್ಯೆ

ಕರಿಯಪ್ಪ ಅರಳಿಕಟ್ಟಿ

ಸವಣೂರ: ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಮಕ್ಕಳು ಕೆಲಸ ಬಿಡಿಸಿ ಮನೆಯಲ್ಲಿ ಕುಂದರಿಸಿದ್ದರಿಂದ ಮನಸ್ಸಿನಲ್ಲಿ ಯಾವುದೋ ವಿಷಯ ಇಟ್ಟುಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯಲವಿಗಿ ಗ್ರಾಮದಲ್ಲಿ ನಡೆದಿದೆ.

ಸಹದೇವಪ್ಪ ಹುಚ್ಚಪ್ಪ ಹತಿರ್ (67) ಮೃತ ವ್ಯಕ್ತಿ.

ಈತ ಬಾರ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಮಕ್ಕಳು ಬೆಳೆದು ನೌಕರಿ ಮಾಡಲು ಶುರು ಮಾಡಿದ್ದರಿಂದ ನೀವು ಕೆಲಸಕ್ಕೆ ಹೋಗುವುದು ಬೇಡವೆಂದು ಮನೆಯಲ್ಲಿ ಇರುವಂತೆ ಹೇಳಿದ್ದರು. ಇದರಿಂದ ಕೆಲಸ ಬಿಟ್ಟು ಮನೆಯಲ್ಲಿದ್ದ ಸಹದೇವಪ್ಪ ಒಬ್ಬನೇ ಇರುವುದು, ಹಾಡು ಕೇಳುವುದನ್ನು ಮಾಡುತ್ತ ಯಾರ ಜತೆಗೂ ಮಾತನಾಡದೆ ಇರುತ್ತಿದ್ದ. ಅಲ್ಲದೆ ಯಾವುದೋ ವಿಷಯ ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.