ಬ್ಯಾಡಗಿ ತಾಲೂಕಿನ ಕೆರವಡಿ ಕ್ರಾಸ್​ ಬಳಿಯ ಬಿದರಕಟ್ಟೆ ಕೆರೆ ಪಕ್ಕದ ರಸ್ತೆಯಲ್ಲಿ (Bad roads) ತಗ್ಗು-&ಗುಂಡಿಗಳಲ್ಲಿ ಮಳೆನೀರು ತುಂಬಿಕೊಂಡಿರುವುದು. 
ಹಾವೇರಿ

Bad roads ಬ್ಯಾಡಗಿ ರಸ್ತೆಗಳು ಯಾರಿಗೂ ಬ್ಯಾಡ್ರೀ..

ತಾಲೂಕಿನಾದ್ಯಂತ ಪ್ರಮುಖ ರಸ್ತೆಗಳು (

Bad roads)

ಮಳೆಯಿಂದಾಗಿ ತೀವ್ರವಾಗಿ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ದಿನನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಬ್ಯಾಡಗಿ-ಹಂಸಭಾವಿ ರಸ್ತೆ, ಚಿಕ್ಕಬಾಸೂರು ಹಾಗೂ ತಿಳವಳ್ಳಿಗೆ ತೆರಳುವ ಪ್ರಮುಖ ಮಾರ್ಗಗಳಲ್ಲಿ ದೊಡ್ಡ ತಗ್ಗು-ಗುಂಡಿಗಳು ಬಿದ್ದಿವೆ. ಪ್ರಸ್ತುತ ಮಳೆಗಾಲದಲ್ಲಿ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ಸಂಚಾರ ಸಂರ್ಪೂಣ ದುಸ್ತರಗೊಂಡಿದೆ. ರಾತ್ರಿ ಹೊತ್ತಲ್ಲಿ ದ್ವಿಚಕ್ರ ವಾಹನ ಚಾಲಕರು ಸ್ವಲ್ಪ ನಿರ್ಲಕ್ಷ$್ ತಪ್ಪಿದರೂ ಅಪಾಯ ಗ್ಯಾರಂಟಿ ಎನ್ನುವಂತಾಗಿದೆ. ಲೋಕೋಪಯೋಗಿ ಇಲಾಖೆ ನೆಪಮಾತ್ರಕ್ಕೆ ಆಗಾಗ ಗುಂಡಿಗಳಿಗೆ ಜಲ್ಲಿಕಲ್ಲಿನ ಪುಡಿ ತಂದು ಹಾಕುತ್ತಿದ್ದಾರೆ ಹೊರತು ಶಾಶ್ವತ ದುರಸ್ತಿ ಮಾಡುತ್ತಿಲ್ಲ.
ಮೋಟೆಬೆನ್ನೂರು, ಕದರಮಂಡಲಗಿ, ಕಾಕೋಳ ರಸ್ತೆ, ಛತ್ರ ರಸ್ತೆ, ಚಿಕ್ಕಬಾಸೂರು-ಅತ್ತಿಕಟ್ಟೆ ರಸ್ತೆ, ಘಾಳಪೂಜಿ, ಬುಡಪನಹಳ್ಳಿ ಮಾರ್ಗ, ಬಿಸಲಹಳ್ಳಿ ಹಾಗೂ ಲಕಮಾಜಿಕೊಪ್ಪಕ್ಕೆ ತೆರಳುವ ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಂಟಿಗಳು ದಟ್ಟವಾಗಿ ಬೆಳೆದು ನಿಂತಿವೆ. ಎದುರಿನಿಂದ ವಾಹನಗಳು ಬಂದಾಗ ರಸ್ತೆ ಪಕ್ಕಕ್ಕೆ ಸರಿಯಲು ಯತ್ನಿಸಿದರೆ ಮುಳ್ಳಿನ ಕಂಟಿಗಳು ವಾಹನಗಳಿಗೆ ಹಾಗೂ ಸವಾರರಿಗೆ ತಗುಲುತ್ತಿವೆ. ರಸ್ತೆ ಬದಿಯ ಜಂಗಲ್​ ಕಟಾವು ಮಾಡದಿರುವುದು ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ.
ಪಟ್ಟಣ ಸೇರಿದಂತೆ ತಿಳವಳ್ಳಿ ರಸ್ತೆಯ ಮಾಸಣಗಿ, ಕುಮ್ಮೂರು, ಕಳಗೊಂಡ, ಚಿಕ್ಕಬಾಸೂರು, ಘಾಳಪೂಜಿ, ಕದರಮಂಡಲಗಿ ಹಾಗೂ ಅಸುಂಡಿ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಅವೈಜ್ಞಾನಿಕ ಉಬ್ಬುಗಳನ್ನು (ಹಂಪ್ಸ್​) ನಿಮಿರ್ಸಲಾಗಿದೆ. ಗುತ್ತಿಗೆದಾರರು ಹಾಗೂ ಇಂಜಿನಿಯರ್​ಗಳ ಹೊಣೆಗೇಡಿತನದಿಂದಾಗಿ ಯಾವುದೇ ರಸ್ತೆ ಸುರಕ್ಷತಾ ನಿಯಮ ಪಾಲಿಸದೇ ಹಂಪ್ಸ್​ ಹಾಕಲಾಗಿದೆ.
ಹಂಪ್ಸ್​ಗಳಿಗೆ ಬಿಳಿ ಬಣ್ಣ ಬಳಿದಿಲ್ಲ. ವಾಹನ ಚಾಲಕರಿಗೆ ಸೂಚನೆ ನೀಡುವ ಯಾವುದೇ ಫಲಕಗಳನ್ನೂ ಅಳವಡಿಸಿಲ್ಲ. ಪರಿಣಾಮ ವೇಗವಾಗಿ ಬರುವ ದ್ವಿಚಕ್ರ ವಾಹನಗಳ ಹಿಂಬದಿಯಲ್ಲಿ ಕುಳಿತ ಮಹಿಳೆಯರು ಹಾಗೂ ಮಕ್ಕಳು ಬಿದ್ದು ಗಂಭೀರವಾಗಿ ಗಾಯಗೊಂಡ ಉದಾಹರಣೆಗಳು ಸಾಕಷ್ಟಿವೆ. ಇಂತಹ ಅವೈಜ್ಞಾನಿಕ ಹಂಪ್ಸ್​ ತೆರವುಗೊಳಿಸುವಂತೆ ಸರ್ಕಾರಿ ಆದೇಶಗಳಿದ್ದರೂ, ಸ್ಥಳಿಯರ ಒತ್ತಡಕ್ಕೆ ಮಣಿದು ಅಧಿಕಾರಿಗಳು ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಾಲೂಕಿನಾದ್ಯಂತ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದು, ಅನುದಾನ ಬಿಡುಗಡೆಯಾಗಿದ್ದರೂ ಸಮರ್ಪಕ ಕಾಮಗಾರಿ ನಡೆಯುತ್ತಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ಒಳಒಪ್ಪಂದದಿಂದಾಗಿ ಕಳಪೆ ಕೆಲಸವಾಗುತ್ತಿದೆ. ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸುತ್ತಿಲ್ಲ. ತಕ್ಷಣ ಸಾರ್ವಜನಿಕರಿಗೆ ಸೂಕ್ತ ರಸ್ತೆ ಸೌಲಭ್ಯ ಕಲ್ಪಿಸದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಹೋರಾಟ ನಡೆಸಲಾಗುವುದು.

— ಮೃತ್ಯುಂಜಯ ಕೊಪ್ಪದ, ತಾಲೂಕು ಜೆಡಿಎಸ್​ ಅಧ್ಯಕ್ಷ.

ಬ್ಯಾಡಗಿ ತಾಲೂಕಿನಲ್ಲಿ ಹಾಯ್ದು ಹೋಗಿರುವ ಗಜೇಂದ್ರಗಡ-ಸೊರಬ ರಸ್ತೆ ದುರಸ್ತಿಗೆ ಅನುದಾನ ಲಭ್ಯವಿದ್ದು, ಟೆಂಡರ್​ ಪ್ರಕ್ರಿಯೆ ರ್ಪೂಣಗೊಂಡಿದೆ. ಇದರಲ್ಲಿ ತಗ್ಗು-ಗುಂಡಿ ಮುಚ್ಚುವುದು ಹಾಗೂ ಜಂಗಲ್​ ಕಟಾವು ಸೇರಿದೆ. ಮಳೆಯಿಂದಾಗಿ ಕೆಲಸ ತಡವಾಗಿದ್ದು, ಒಂದೆರಡು ದಿನಗಳಲ್ಲಿ ದುರಸ್ತಿ ಕಾಮಗಾರಿ ಆರಂಭವಾಗಲಿದೆ.

— ಎ.ಎಸ್​. ಪಾಟೀಲ, ಲೋಕೋಪಯೋಗಿ ಇಲಾಖೆ ಇಂಜಿನಿಯರ್​.