ರಟ್ಟಿಹಳ್ಳಿ ತಾಲೂಕು ಮಾಸೂರು ಗ್ರಾಮದಲ್ಲಿ ಕರವೇ ವತಿಯಿಂದ ಉಪತಹಸೀಲ್ದಾರ್ ಮಹಾಂತೇಶ ಜಗತಾಪ್ ಅವರಿಗೆ ಮನವಿ ಸಲ್ಲಿಸಲಾಯಿತು. ಗಿರೀಶ, ಶಿವಾನಂದ ಪೂಜಾರ, ಮಂಜುನಾಥ ಕಾಯಕದ, ಸಿದ್ದು ವಿರಕ್ತಮಠ ಇತರರು ಇದ್ದರು. 
ಹಾವೇರಿ

ಸರ್ವಜ್ಞನ ಪ್ರಾಧಿಕಾರ ಅನುಷ್ಠಾನಕ್ಕೆ ಬರಲಿ Sarvagna authority

ರಟ್ಟಿಹಳ್ಳಿ: ತಾಲೂಕಿನ ಮಾಸೂರು ಗ್ರಾಮದ ಬಸ್ ನಿಲ್ದಾಣಕ್ಕೆ ವರಕವಿ ಸರ್ವಜ್ಞರ ನಾಮಕರಣ ಹಾಗೂ ಸರ್ವಜ್ಞನ ಪ್ರಾಧಿಕಾರ (Sarvagna authority) ಅನುಷ್ಠಾನಕ್ಕೆ ಒತ್ತಾಯಿಸಿ ಕರವೇ (ನಾರಾಯಣಗೌಡರ ಬಣ) ವತಿಯಿಂದ ಗ್ರಾಮದಲ್ಲಿ ಉಪತಹಸೀಲ್ದಾರ್ ಮಹಾಂತೇಶ ಜಗತಾಪ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಾನಂದ ಪೂಜಾರ ಮಾತನಾಡಿ, ವರಕವಿ ಸರ್ವಜ್ಞನ ವಚನಗಳು ಮತ್ತು ಸಂದೇಶಗಳು ರಾಜಕೀಯ ಜನಪ್ರತಿನಿಧಿಗಳ ವೇದಿಕೆಯ ಕಾರ್ಯಕ್ರಮದಲ್ಲಿ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿವೆ. ಜಿಲ್ಲೆಯಲ್ಲಿ ಅನೇಕ ಪ್ರಾಧಿಕಾರಗಳು ಚಟುವಟಿಕೆ ಕೈಗೊಂಡಿವೆ. ಆದರೆ, ಸರ್ಕಾರದ ನಿರ್ಲಕ್ಷ್ಯದಿಂದ ವರಕವಿ ಸರ್ವಜ್ಞನ ಪ್ರಾಧಿಕಾರ ಇಲ್ಲಿಯವರೆಗೆ ಅನುಷ್ಠಾನವಾಗಿಲ್ಲ. ಕೂಡಲೇ ಪ್ರಾಧಿಕಾರದ ಕಾರ್ಯಾರಂಭವಾಗಬೇಕು ಎಂದು ಆಗ್ರಹಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಗಿರೀಶ ರ್ಬಾ, ಮಂಜುನಾಥ ಕಾಯಕದ, ಸಿದ್ದು ವಿರಕ್ತಮಠ, ಸುರೇಶ ಹಳಬಸಣ್ಣನವರ, ಭಾಸ್ಕರ, ಕುಮಾರ ರಟ್ಟಿಹಳ್ಳಿ, ಗಜೇಂದ್ರ, ಅಶೋಕ ಮೇದಾರ, ಜಾಕೀರ ಬುಳ್ಳಾಪುರ, ಅಬ್ಬು ಕೋಡಮಗ್ಗಿ, ಉಜಪ್ಪ ಎಂ ಇತರರು ಇದ್ದರು.