ಬ್ಯಾಡಗಿ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ಅಡಿಕೆ (Areca nut plantation) ಸಸಿಗಳಿಗೆ ಹನಿ ನೀರಾವರಿ ವ್ಯವಸ್ಥೆ. 
ಹಾವೇರಿ

Areca nut plantation ಮಲೆನಾಡು ವ್ಯಾಪಿಸುತ್ತಿರುವ ಅಡಿಕೆ

ವಿವೇಕಾನಂದ ದಾಸನಕೊಪ್ಪ
"

3 ಎಕರೆ ಜಮೀನಿನಲ್ಲಿ ಅಡಿಕೆ ಸಸಿ ನೆಟ್ಟು ನಾಲ್ಕು ವರ್ಷವಾಗಿದ್ದು, ಗಿಡಗಳು ಫಸಲಿಗೆ ಬಂದಿವೆ. ಪ್ರತಿ ಎಕರೆಗೂ 3 ಲಕ್ಷ ರೂ. ಲಾಭದ ನಿರೀಕ್ಷೆಯಿದೆ. ತೋಟದ ಮಧ್ಯೆ ಅರಿಷಿನ, ಶುಂಠಿ, ತೊಗರಿ, ಚೆಂಡು ಹೂವಿನ ಬೆಳೆಯುತ್ತಿದ್ದೇವೆ. ಅಡಿಕೆ ಜತೆಗೆ ಮಿಶ್ರಬೆಳೆ ಪದ್ಧತಿ ಅಳವಡಿಸಿಕೊಂಡಲ್ಲಿ ಅಲ್ಪಭೂಮಿಯಲ್ಲಿ ಹೆಚ್ಚು ಲಾಭ ಗಳಿಸಬಹುದು.

| ಹೇಮಂತ ಶೆಟ್ರ, ಪ್ರಗತಿಪರ ರೈತ- ಬಿಸಲಹಳ್ಳಿ ಗ್ರಾಮ

"

ರೈತರು ಅಡಿಕೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಯತ್ತ ಮುಖ ಮಾಡಿದ್ದಾರೆ. ಇಲಾಖೆಯಿಂದ ಸಹಾಯಧನ, ಬೆಳೆ ವಿಮೆ, ಪ್ರೋತ್ಸಾಹಧನ, ಹನಿ ನೀರಾವರಿ ಸೇರಿದಂತೆ ಹಲವು ಸೌಲಭ್ಯಗಳಿವೆ. ಇಲಾಖೆ ಎಲ್ಲ ನೆರವು ನೀಡುವ ಮೂಲಕ ಸಲಹೆ, ಮಾರ್ಗದರ್ಶನ ನೀಡುತ್ತಿದೆ.

| ಅಶೋಕ ಕುರುಬರ, ಸಹಾಯಕ ತೋಟಗಾರಿಕೆ ನಿರ್ದೇಶಕ ಬ್ಯಾಡಗಿ

ಅಡಿಕೆ ತೋಟ ವಿಸ್ತರಣೆ ವಿವರ